AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು,  ಲೈಟ್ ಹಾಕಿಕೊಂಡು ಚಲಿಸಿದ ವಾಹನ ಚಾಲಕರು

ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು, ಲೈಟ್ ಹಾಕಿಕೊಂಡು ಚಲಿಸಿದ ವಾಹನ ಚಾಲಕರು

ರಮೇಶ್ ಬಿ. ಜವಳಗೇರಾ
|

Updated on: Jun 20, 2026 | 7:19 PM

Share

ಬೆಂಗಳೂರು ಮಾತ್ರವಲ್ಲ ದೇಶದಲ್ಲೂ ಸಹ ಈ ಬಾರಿ ವಾಡಿಕೆಗಿಂತ ಮಳೆಯಾಗಿಲ್ಲ. ಆದರೂ ಇಂದು (ಜೂನ್ 20) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ ಕೃಪೆತೋರಿದ್ದಾನೆ. ಆದ್ರೆ, ಬಂದ ಸಣ್ಣ ಹನಿಯ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಹೌದು...ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯ್ತು. ನೀರು ಹೋಗದ ರೀತಿ ಬಂದೋಬಸ್ತ್ ಮಾಡಿರುವುದಿಂದ ಎಲ್ಲೊಂದರಲ್ಲಿ ಮಳೆ ನೀರು ನೀಂತುಕೊಂಡಿದ್ದು, ಹಲವೆಡೆ ಸಂಚಾರ ದಟ್ಟಣೆಯಾಗಿದೆ. ಸಣ್ಣ ಮಳೆಗೆ ಬೆಂಗಳೂರು ಹೇಗಾಗಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಬೆಂಗಳೂರು, (ಜೂನ್ 20): ಬೆಂಗಳೂರು ಮಾತ್ರವಲ್ಲ ದೇಶದಲ್ಲೂ ಸಹ ಈ ಬಾರಿ ವಾಡಿಕೆಗಿಂತ ಮಳೆಯಾಗಿಲ್ಲ. ಆದರೂ ಇಂದು (ಜೂನ್ 20) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ (Bengaluru Rain) ಕೃಪೆತೋರಿದ್ದಾನೆ. ಆದ್ರೆ, ಬಂದ ಸಣ್ಣ ಹನಿಯ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಹೌದು…ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ಹಲವೆಡೆ ಸಂಚಾರ ದಟ್ಟಣೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯ್ತು.   ಇನ್ನು ಮೋಡ ಕವಿದ ವಾತಾವರಣದಿಂದಾಗಿ ವಾಹನ ಸವಾರರು ಸಂಜೆ ವೇಳೆಯಲ್ಲೇ ಹೆಡ್ ಲೈಟ್ ಆನ್ ಮಾಡಿಕೊಂಡು ಪ್ರಯಾಣಿಸುತ್ತಿರುವುದು ಕಂಡುಬಂತು. ಇನ್ನು ಸಣ್ಣ ಮಳೆಗೆ ಬೆಂಗಳೂರು ಹೇಗಾಗಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಇದನ್ನೂ ಓದಿ : Karnataka Weather Forecast: ಕರಾವಳಿಯಲ್ಲಿ ಮುಂಗಾರು ಚುರುಕು, ಉ.ಕ ಜಿಲ್ಲೆಗಳಲ್ಲಿ ಬಿಸಿ ಗಾಳಿ: 5 ದಿನದ ವರದಿ ಹೀಗಿದೆ

Follow Us