AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ ಮಾತ್ರ: ಹೇಗಿದೆ ನೋಡಿ ಕೃಷ್ಣ ಪಥ

ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ ಮಾತ್ರ: ಹೇಗಿದೆ ನೋಡಿ ಕೃಷ್ಣ ಪಥ

ರಮೇಶ್ ಬಿ. ಜವಳಗೇರಾ
|

Updated on: Jun 26, 2026 | 10:09 PM

Share

ಮುಖ್ಯಾಂಶಗಳು

  • ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯನ್ನು ಬೆಸೆಯುವ ಬಿಡಿಎಯ 10 ಪಥಗಳ ರಸ್ತೆ ನಾಳೆ ಉದ್ಘಾಟನೆ
  • ಮಾಜಿ ಸಿಎಂ 'ಎಸ್.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಮಾರ್ಗ
  • ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ ಮಾತ್ರ

ಬೆಂಗಳೂರಿನ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯನ್ನು ಬೆಸೆಯುವ ಬಿಡಿಎಯ 10 ಪಥಗಳ 'ಮೇಜರ್‌ ಆರ್ಟೀರಿಯಲ್‌ ರಸ್ತೆ' (ಎಂಎಆರ್) ನಾಳೆ ಅಂದರೆ ಜೂನ್‌ 27ರಂದು ಲೋಕಾರ್ಪಣೆಯಾಗಲಿದೆ. ಮಾಜಿ ಸಿಎಂ 'ಎಸ್.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಈ ಟೋಲ್‌-ಮುಕ್ತ ಮಾರ್ಗವು, ಸಂಚಾರ ಸಮಯವನ್ನು ಕೇವಲ 15 ನಿಮಿಷಗಳಿಗೆ ತಗ್ಗಿಸಲಿದೆ. ನೈಸ್ ರಸ್ತೆಗೆ ಪರ್ಯಾಯವಾಗಿರುವ ಈ ರಸ್ತೆಯು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಕೆಂಪೇಗೌಡ ಬಡಾವಣೆಯ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ಬೆಂಗಳೂರು, (ಜೂನ್ 26): ಬೆಂಗಳೂರಿನ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯನ್ನು ಬೆಸೆಯುವ ಬಿಡಿಎಯ 10 ಪಥಗಳ ‘ಮೇಜರ್‌ ಆರ್ಟೀರಿಯಲ್‌ ರಸ್ತೆ’ (ಎಂಎಆರ್) ನಾಳೆ ಅಂದರೆ ಜೂನ್‌ 27ರಂದು ಲೋಕಾರ್ಪಣೆಯಾಗಲಿದೆ. ಮಾಜಿ ಸಿಎಂ ‘ಎಸ್.ಎಂ.ಕೃಷ್ಣ ರಸ್ತೆ’ ಎಂದು ನಾಮಕರಣಗೊಂಡಿರುವ ಈ ಟೋಲ್‌-ಮುಕ್ತ ಮಾರ್ಗವು, ಸಂಚಾರ ಸಮಯವನ್ನು ಕೇವಲ 15 ನಿಮಿಷಗಳಿಗೆ ತಗ್ಗಿಸಲಿದೆ. ನೈಸ್ ರಸ್ತೆಗೆ ಪರ್ಯಾಯವಾಗಿರುವ ಈ ರಸ್ತೆಯು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಕೆಂಪೇಗೌಡ ಬಡಾವಣೆಯ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್‌ ರಸ್ತೆ ಅಥವಾ ನಾಯಂಡಹಳ್ಳಿ -ಸುಮನಹಳ್ಳಿ ಜಂಕ್ಷನ್‌ ಮುಖಾಂತರ ಚಲಿಸಬೇಕಾಗಿದ್ದು, ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಇದೀಗ ಎಸ್‌.ಎಂ.ಕೃಷ್ಣ ರಸ್ತೆ ಸಂಚಾರಮುಕ್ತವಾದ ಬಳಿಕ ಆ ಅವಧಿ 15 ನಿಮಿಷಗಳಿಗೆ ತಗ್ಗಲಿದೆ. ಇನ್ನು ನಾಳೆ ಉದ್ಘಾಟನೆಯಾಗುತ್ತಿರುವುದರಿಂದ ರಸ್ತೆ ಲೈಟಿಂಗ್ಸ್​​ನಿಂದ ಜಗಮಗಿಸುತ್ತಿದೆ.

 

Follow Us