ಬೆಂಗಳೂರು: ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆ ವಿರುದ್ಧವೇ ಅವಹೇಳನ!
ಲೋಕಾಯುಕ್ತಕ್ಕೆ ರಾಜಕಾಲುವೆ ಒತ್ತುವರಿ ಮತ್ತು ಅಕ್ರಮ ಬ್ಯಾನರ್‌ಗಳ ಕುರಿತು ದೂರು ನೀಡಿದ್ದ ಮಹಿಳೆ ಸತ್ಯವತಿ ಅವರಿಗೆ ತೀವ್ರ ಆಘಾತ ಎದುರಾಗಿದೆ. ದೂರು ನೀಡಿದ ಮಹಿಳೆ ವಿರುದ್ಧವೇ ತಲಕಾವೇರಿ ಲೇಔಟ್‌ನ ಗಲ್ಲಿಗಲ್ಲಿಯಲ್ಲಿ ಅವಹೇಳನಕಾರಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅಧಿಕಾರಿಗಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆಂದು ಈ ಬ್ಯಾನರ್‌ಗಳಲ್ಲಿ ಆರೋಪಿಸಲಾಗಿದೆ.
ಬೆಂಗಳೂರು, ಏಪ್ರಿಲ್ 27: ಬೆಂಗಳೂರಿನ ಎಚ್‌ಎಎಲ್‌ನ ವಿಭೂತಿಪುರದಲ್ಲಿ ರಾಜಕಾಲುವೆ ಒತ್ತುವರಿ ಹಾಗೂ ಅಕ್ರಮ ಬ್ಯಾನರ್‌ಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆ ಸತ್ಯವತಿ ಎಂಬವರಿಗೆ ಬಿಗ್ ಶಾಕ್ ಎದುರಾಗಿದೆ. ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಿದ ನಂತರ, ಅವರ ವಿರುದ್ಧವೇ ಅವಹೇಳನಕಾರಿ ಬ್ಯಾನರ್‌ಗಳನ್ನು ತಲಕಾವೇರಿ ಲೇಔಟ್‌ನ ಗಲ್ಲಿಗಲ್ಲಿಯಲ್ಲಿ ಅಳವಡಿಸಲಾಗಿದೆ. ಈ ಬ್ಯಾನರ್‌ಗಳಲ್ಲಿ, ಅಧಿಕಾರಿಗಳಿಗೆ ಹೆದರಿಸಿ ಸತ್ಯವತಿ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ. ಸತ್ಯವತಿ ಜಿಬಿಎ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಅವರು ಜಿಬಿಎ ಕಮಿಷನರ್ ವಿರುದ್ಧವೂ ದೂರು ನೀಡಿದ್ದರು. ಸದ್ಯ ಸತ್ಯವತಿ ಎಚ್‌ಎಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಲೋಕಾಯುಕ್ತಕ್ಕೆ ದೂರು ನೀಡಿದ ಮಹಿಳೆಗೆ ಇಂತಹ ಅವಹೇಳನಕಾರಿ ಬ್ಯಾನರ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
