AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ

ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ

ಅಕ್ಷತಾ ವರ್ಕಾಡಿ
|

Updated on:Oct 20, 2026 | 9:52 AM

Share

ಬೆಂಗಳೂರಿನ ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ. ಶ್ರೀ ದುರ್ಗಾದೇವಿಯ ಪ್ರತಿಷ್ಠಾಪನೆ, ಕಳಶ ಮೆರವಣಿಗೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲ ದಿನ ನಡೆದವು. ವಿನಾಯಕ ಗೆಳೆಯರ ಬಳಗ ಆಯೋಜಿಸಿರುವ ಈ ಉತ್ಸವದಲ್ಲಿ ಸಮುದಾಯ ಸೇವಾ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ.

ಬೆಂಗಳೂರಿನ ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ. ವಿನಾಯಕ ಗೆಳೆಯರ ಬಳಗ ಆಯೋಜಿಸಿರುವ ಈ ಉತ್ಸವದ ಏಳನೇ ವರ್ಷದ ಸಂಭ್ರಮ ಇದಾಗಿದೆ. ಮೊದಲ ದಿನ ಶ್ರೀ ದುರ್ಗಾದೇವಿಯ ಪ್ರತಿಷ್ಠಾಪನೆ ವಿಧಿವತ್ತಾಗಿ ನೆರವೇರಿತು. ಕಳಶ ಹೊತ್ತ ಮಹಿಳೆಯರು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದರು. ಮಹಾಮಂಗಳಾರತಿಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಈ ಉತ್ಸವದಲ್ಲಿ ಮುತ್ತೈದೆಯರ ಕಾರ್ಯಕ್ರಮಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಶಾಸಕರಾದ ಎನ್. ಎ. ಹ್ಯಾರಿಸ್ ಮತ್ತು ನಾಗರಾಜ್ ಅವರ ನೇತೃತ್ವದಲ್ಲಿ ವಿನಾಯಕ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದೆ. ಉತ್ಸವದ ಭಾಗವಾಗಿ ಹೋಮ ಕಾರ್ಯಕ್ರಮ ನಡೆಸಿ, ನಾಡಿನ ಜನತೆಗೆ ಒಳಿತನ್ನು ಕೋರಲಾಯಿತು. ಅಷ್ಟೇ ಅಲ್ಲದೆ, ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಮತ್ತು ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್‌ಗಳ ವಿತರಣೆಯಂತಹ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊನೆಯ ದಿನ ದೇವಿಯ ಭವ್ಯ ಮೆರವಣಿಗೆಯನ್ನು ವಿನಾಯಕ ನಗರದ ಮುಖ್ಯ ರಸ್ತೆಗಳಲ್ಲಿ ನಡೆಸಿ, ಹಲಸೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Oct 20, 2026 09:50 AM

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More