ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸಾಣಾಪುರ ಕೆರೆಗೆ ಬಿದ್ದಿದೆ ಬೋಂಗಾ, ಕೆರೆ ಒಡೆದರೆ ಊರು ಮುಳುಗಡೆ ನಿಶ್ಚಿತ

Updated on: Aug 06, 2025 | 12:01 PM

ಸ್ಥಳೀಯರು ಹೇಳುವ ಪ್ರಕಾರ ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾಣಾಪುರ ಕೆರೆಗೆ ದುಸ್ಥಿತಿ ಬಂದೊದಗಿದೆ. ಜಿಲ್ಲಾಡಳಿಯ ಮುನ್ನೆಚ್ಚರಿಕೆ ಕ್ರಮತೆಗೆದುಕೊಳ್ಳಲು ತಯಾರಿಲ್ಲ, ಅಧಿಕಾರಿಗಳು ಕಂಪ್ಲಿಯಲ್ಲಿ ಫೆವಿಕಾಲ್ ಮೆತ್ತಿಕೊಂಡು ಕೂತಿದ್ದಾರೆ, ಪರಿಶೀಲನೆಗೆ ಬರೋದಿಲ್ಲ ಎಂದು ಒಬ್ಬ ನಿವಾಸಿ ಹೇಳುತ್ತಾರೆ. ಗಂಗಾವತಿಯ ಶಾಸಕ ಗಾಲಿ ಜನಾರ್ಧನರೆಡ್ಡಿ ಮಾಧ್ಯಮಗಳ ಮುಂದೆ ಬಂದು ನಿಲ್ಲುವ ಬದಲು ಸಾಣಾಪುರಕ್ಕೆ ಒಮ್ಮೆ ಹೋಗಬಾರದೇ?

ಕೊಪ್ಪಳ, ಆಗಸ್ಟ್ 6: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಸಾಣಾಪುರ ಕೆರೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾವಿರಾರು ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಇದನ್ನು ವೀಕ್ಷಿಸಲು ಬರುತ್ತಾರೆ ಮತ್ತು ಇಲ್ಲಿಂದ ಕಲ್ಲೆಸತ ಅಳತೆ ದೂರದಲ್ಲಿರುವ ರೆಸಾರ್ಟ್​ಗಳಲ್ಲಿ ತಂಗುತ್ತಾರೆ. ಸಾಣಾಪುರ ಕೆರೆಗೆ ಬೋಂಗಾ ಬಿದ್ದಿದ್ದು ಸ್ಥಳೀಯರಲ್ಲಿ ಬೀತಿಯನ್ನುಂಟು ಮಾಡಿದೆ. ನಮ್ಮ ಕೊಪ್ಪಳ ವರದಿಗಾರ ಕೆರೆ ಮತ್ತು ಬೋಂಗಾ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತುಂಗಭದ್ರಾ ಜಲಾಶಯದಿಂದ ಸಾಣಾಪುರ ಕೆರೆಗೆ 5,000 ಕ್ಯೂಸೆಕ್ಸ್ ನೀರು ಬಿಡಲಾಗಿದೆ ಮತ್ತು ಕೆರೆಯಿಂದಲೇ ನದಿಯ ಎಡದಂಡೆ ಕಾಲುವೆಗಳಿಗೆ ನೀರು ಹರಿಬಿಡಲಾಗುತ್ತದೆ. ಕೆರೆಗೆ ಬೋಂಗಾ ಬಿದ್ದಿರುವ ಕಾರಣ ಅದು ಒಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗಲ್ಲ, ಹಾಗೇನಾದರೂ 1,500 ಜನಸಂಖ್ಯೆ ಇರುವ ಸಾಣಾಪುರ ಗ್ರಾಮ ಮತ್ತು ಇಲ್ಲಿರುವ ರೆಸಾರ್ಟ್​ಗಳು ಮುಳಗಡೆಯಾಗಲಿವೆ.

ಇದನ್ನೂ ಓದಿ:   ವರ್ಷದ ಮೊದಲ ಮಳೆಗೆ ಬಂಡೀಪುರ ಹಸಿರುಮಯ: ಕೆರೆಗಳು ಭರ್ತಿ, ಸಫಾರಿಗೆ ಒಳ್ಳೆ ಸಮಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ