ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಮಂಜ ಎಲಿಮಿನೇಟ್ ಆಗಿ ಹೊರಗೆ ಬಂದ ಬಳಿಕ ಟಿವಿ9 ಜೊತೆ ಮಾತನಾಡಿದ್ದಾರೆ. ಈ ಶೋಗೆ ಹೋಗಬೇಕು ಎಂಬುದು ಮಂಜ ಅವರ ಆಸೆ ಆಗಿತ್ತು. ಅಗ್ನಿ ಪರೀಕ್ಷೆ ಆಡಿಷನ್ನಲ್ಲಿ ಭಾಗವಹಿಸುವ ಸಲುವಾಗಿ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದ ಘಟನೆಯನ್ನು ಮಂಜ ನೆನಪು ಮಾಡಿಕೊಂಡಿದ್ದಾರೆ.
ಮಾಡರ್ನ್ ಮಹಾಕವಿ ಮಂಜ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿ ಹೊರಗೆ ಬಂದ ಬಳಿಕ ಟಿವಿ9 ಜೊತೆ ಮಾತನಾಡಿದ್ದಾರೆ. ಈ ಶೋಗೆ ಹೋಗಬೇಕು ಎಂಬುದು ಮಂಜ ಅವರ ಆಸೆ ಆಗಿತ್ತು. ಆದರೆ ಆ ಜರ್ನಿ ಅಷ್ಟು ಸುಲಭ ಆಗಿರಲಿಲ್ಲ. ಅಗ್ನಿ ಪರೀಕ್ಷೆ ಆಡಿಷನ್ನಲ್ಲಿ ಭಾಗವಹಿಸುವ ಸಲುವಾಗಿ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದ ಘಟನೆಯನ್ನು ಮಂಜ ನೆನಪು ಮಾಡಿಕೊಂಡಿದ್ದಾರೆ. ‘ಜೆಪಿ ನಗರದಿಂದ ನಾಗರಭಾವಿ ತನಕ ನಾನು ನಡೆದುಕೊಂಡು ಹೋಗಿದ್ದೆ. ಮಧ್ಯರಾತ್ರಿ ನನಗೆ ನಿದ್ರೆ ಬರಲ್ಲ. ಯಾವಾಗಲೂ ನನಗೆ ತಲೆಯಲ್ಲಿ ದುಡ್ಡಿನ ಬಗ್ಗೆ ಆಲೋಚನೆ ಬರುತ್ತದೆ. ಇರುವುದು ಒಂದೇ ಜೀವನ. ನಾವು ಸುಮ್ಮನೇ ಸಾಯಬಾರದು. ನಾನು ದುಡಿಯುತ್ತೇನೆ ಎಂಬ ನಂಬಿಕೆ ನನಗೆ ಇದೆ’ ಎಂದು ಮಂಜ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

