ಬಿಜೆಪಿ ಸರ್ಕಾರಕ್ಕೆ ಸಾಮಾಜಿಕ ಬದ್ಧತೆಯಿದೆ, ಯೋಜನಾಬದ್ಧ ರೀತಿಯಲ್ಲಿ ಅದು ಮುಂದೆ ಸಾಗುತ್ತಿದೆ: ಕೋಟಾ ಶ್ರೀನಿವಾಸ ಪೂಜಾರಿ
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಖಂಡಿತವಾಗಿಯೂ ಸಾಮಾಜಿಕ ಬದ್ಧತೆ ಇದೆ. ಸರ್ವರನ್ನೂ ಒಳಗೊಂಡ ಕಠಿಣವಾದ ಕಾನೂನನ್ನು ಅನುಸರಿಸಿಕೊಂಡು ಸರಿಯಾದ ಮಾರ್ಗದಲ್ಲಿ ಸರ್ಕಾರ ಮುನ್ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಮೈಸೂರು: ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ ತಲೆಮರೆಸಿಕೊಂಡಿರುವ ಈಗ ಹೇಳ ಹೆಸರಲ್ಲದ ಅಲ್-ಖೈದಾದ ಉಗ್ರ ಅಲ್-ಜವಾಹಿರಿ ಹೆಸರಿನ ವಯೋವೃದ್ಧ ಮೊನ್ನೆ ಬಿಡುಗಡೆ ಮಾಡಿರುವ 9 ನಿಮಿಷಗಳ ವಿಡಿಯೋ ಸುಖಾಸುಮ್ಮನೆ ಸದ್ದು ಮಾಡುತ್ತಿದೆ ಮಾರಾಯ್ರೇ. ವಿಡಿಯೋನಲ್ಲಿ ಅವನು ಮಂಡ್ಯದ ಹುಡುಗಿ ಮುಸ್ಕಾನ್ ಖಾನ್ ರನ್ನು (Muskan Khan) ಹೊಗಳಿದ್ದಾನೆ. ಅದಕ್ಕೂ ನಮಗೂ ಸಂಬಂಧವೇ ಇಲ್ಲ, ವಿದೇಶಿ ಮೂಲದ ಒಬ್ಬ ಉಗ್ರನಿಂದ ನಮಗೆ ಶಹಬ್ಬಾಸ್ ಗಿರಿ ಬೇಕಿಲ್ಲ ಎಂದು ಮುಸ್ಕಾನ್ ಕುಟುಂಬ ಹೇಳಿದೆ. ಆದರೆ, ಆ ವಿಡಿಯೋ ಕುರಿತು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದೇ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಇದಕ್ಕೆಲ್ಲ ಅರ್ ಎಸ್ ಎಸ್ ಹೊಣೆ ಎಂದು ಹೇಳುತ್ತಿರುವುದನ್ನು ಮೈಸೂರು ಪ್ರವಾಸದಲ್ಲಿದ್ದ ಸಚಿವ ಕೋಟಾ ಶ್ರೀನಿವಾದ ಪೂಜಾರಿ (Kota Srinivas Pujari) ಅವರ ಗಮನಕ್ಕೆ ಮಾಧ್ಯಮದವರು ತಂದಾಗ ಅವರು ಹೀಗೆ ಉತ್ತರ ಕೊಟ್ಟರು.
ಪೂಜಾರಿ ಅವರು ಹೇಳೋದೇನೆಂದರೆ ಕಾಂಗ್ರೆಸ್ ಧುರೀಣರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಯಾವತ್ತೂ ಬಿಜೆಪಿಯನ್ನು ಹೊಗಳಿ ಮಾತಾಡುವುದಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಖಂಡಿತವಾಗಿಯೂ ಸಾಮಾಜಿಕ ಬದ್ಧತೆ ಇದೆ. ಸರ್ವರನ್ನೂ ಒಳಗೊಂಡ ಕಠಿಣವಾದ ಕಾನೂನನ್ನು ಅನುಸರಿಸಿಕೊಂಡು ಸರಿಯಾದ ಮಾರ್ಗದಲ್ಲಿ ಸರ್ಕಾರ ಮುನ್ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಹಿಜಾಬ್ ವಿಷಯದಲ್ಲಿ ಸರ್ಕಾರ ಯಾವ ಕ್ರಮವನ್ನೂ ಜಾರಿಗೊಳಿಸಿಲ್ಲ. ಕಾನೂನು ಮತ್ತು ನ್ಯಾಯಾಲಯ ಏನು ತೀರ್ಪು ನೀಡಿದಿಯೋ ಅದನ್ನು ಮಾತ್ರ ಸರ್ಕಾರ ಪಾಲಿಸುತ್ತಿದೆ. ಎಲ್ಲ ಸಮುದಾಯಗಳನ್ನು ಒಳಗೊಂಡ ಯೋಜನಾಬದ್ಧವಾದ ರೀತಿಯಲ್ಲಿ ಸರ್ಕಾರ ಮುನ್ನಡೆಯುತ್ತಿದೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ