ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಮಾಡಲು ತೀರ್ಮಾನ
ದಾವಣಗೆರೆಯಲ್ಲಿ ನಡೆದಿದ್ದ ಸಿದ್ಧರಾಮೋತ್ಸವ ಸಮಾವೇಶ ಹೊರ ದಾಖಲೆ ಬರೆದಿದೆ. ಈ ಸಮಾವೇಶ ರಾಜ್ಯ ರಾಜಕಾರಣವನ್ನೇ ಬದಲಾವಣೆ ಮಾಡಿತು. ಈಗ ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸ ಆಚರಣೆಗೆ ನಿರ್ಧರಿಸಲಾಗಿದೆ. ಇಂದು ದಾವಣಗೆರೆಯಲ್ಲಿ ನಡೆದ ಬಿಎಸ್ವೈ ಬಣದ ನಾಯಕರ ಸಭೆಯಲ್ಲಿ ತೀರ್ಮಾನವಾಗಿದೆ. ಇನ್ನು ಈ ಬಗ್ಗೆ ಎಂಪಿ ರೇಣುಕಾಚಾರ್ಯ ಮಾಹಿತಿ ನೀಡಿದ್ದಾರೆ.
ದಾವಣಗೆರೆ, (ಡಿಸೆಂಬರ್ 15): ದಾವಣಗೆರೆಯಲ್ಲಿ ನಡೆದಿದ್ದ ಸಿದ್ಧರಾಮೋತ್ಸವ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶವಾಗಿದೆ. ಇದುವರೆಗೂ ಯಾವ ಪಕ್ಷದ ಸಮಾವೇಶದಲ್ಲಿ ಸೇರದಷ್ಟು ಜನ ಅಂದು ಸಿದ್ದರಾಮೋತ್ಸವದಲ್ಲಿ ಸೇರಿದ್ದರು. ಇದೀಗ ಅದೇ ಮಾದರಿಯಲ್ಲಿ ಯಡಿಯೂರಪ್ಪನವ ಜನ್ಮದಿನೋತ್ಸ ಆಚರಣೆಗೆ ಅವರ ಅಭಿಮಾನಗಳು ಮುಂದಾಗಿದೆ. ಯಡಿಯೂರಪ್ಪ ಬಣದ ಮಾಜಿ ಶಾಸಕರು, ಮಾಜಿ ಸಚಿವರುಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಫೆ.27ರಂದು ದಾವಣಗೆರೆಯಲ್ಲಿ ಯಡಿಯೂರಪ್ಪ ಜನ್ಮದಿನ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಯಡಿಯೂರಪ್ಪ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಈ ಜನ್ಮದಿನೋತ್ಸ ಕಾರ್ಯಕ್ರಮ ಆಯೋಜಿಸಲಾಗುತ್ತೆ. ಸಭೆ ಸೇರಿದ ಹತ್ತು ಜನರ ಒಂದು ಸಮಿತಿ ಮಾಡಲಾಗಿದೆ. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ನಮ್ಮಲ್ಲಿ ಭಿನ್ನ ಮತವಿಲ್ಲ, ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ತೇವೆ. ಸಭೆಯಲ್ಲಿ ದೆಹಲಿಗೆ ಹೋಗುವ ಬಗ್ಗೆ ಅಭಿಪ್ರಾಯ ತಿಳಿಸಲಾಗಿದೆ ಎಂದು ತಿಳಿಸಿದರು.
Published on: Dec 15, 2024 04:35 PM