ಭಜನೆ, ಘಂಟೆ ಶಬ್ದದಿಂದ ಕಿರಿಕಿರಿ ಆರೋಪ: ದೇಗುಲದ ಬಳಿ ಮುಸ್ಲಿಂ ವ್ಯಕ್ತಿ ಹೈಡ್ರಾಮಾ
ಚಿಕ್ಕಮಗಳೂರಿನ ಹಳೆ ಉಪ್ಪಳ್ಳಿಯ ಈಶ್ವರ ದೇವಾಲಯದಲ್ಲಿ ಭಜನೆ ನಿಲ್ಲಿಸುವಂತೆ ಮುಸ್ಲಿಂ ವ್ಯಕ್ತಿ ಫಾರೂಕ್ ಹೈಡ್ರಾಮಾ ಸೃಷ್ಟಿಸಿದ್ದಾರೆ. ಭಜನೆಯಿಂದ ಕಿರಿಕಿರಿ ಆಗುತ್ತಿದೆ ಎಂದು ಆರೋಪಿಸಿ, ಪೊಲೀಸರಿಗೆ ಕರೆ ಮಾಡಿ ವಾಗ್ವಾದ ನಡೆಸಿದ್ದಾರೆ. ದೇವಸ್ಥಾನದವರು ಮಂಗಳಾರತಿ ಸಮಯದಲ್ಲಿ ಕೇವಲ ಹತ್ತು ನಿಮಿಷ ಭಜನೆ ಮಾಡುವುದಾಗಿ ತಿಳಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 25: ಭಜನೆ ಹಾಡು, ಜಾಗಟೆ, ಘಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆಯೆಂದು ಮುಸ್ಲಿಂ ವ್ಯಕ್ತಿಯೊಬ್ಬ ಚಿಕ್ಕಮಗಳೂರು ನಗರದ ಹಳೇ ಉಪ್ಪಳ್ಳಿಯಲ್ಲಿರುವ ಈಶ್ವರ ದೇಗುಲ ಬಳಿ ಹೈಡ್ರಾಮಾ ನಡೆಸಿದ್ದಾನೆ. ಭಜನೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪೊಲೀಸರಿಗೆ ಕರೆ ಮಾಡಿದ್ದು, ದೇವಾಲಯದಿಂದ ಬರುವ ಶಬ್ದದಿಂದ ಕಿರಿಕಿರಿ ಆಗುತ್ತಿದೆ. ಹೀಗಾಗಿ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಫಾರೂಕ್ ಎಂಬಾತ ಪಟ್ಟು ಹಿಡಿದಿದ್ದಾನೆ. ದೇಗುಲದ ಅಕ್ಕಪಕ್ಕದ ನಿವಾಸಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದು, ಈತ ದೇವಾಲಯದ ಪಕ್ಕದಲ್ಲೇ ವಾಸವಿದ್ದಾನೆ ಎಂಬುದು ಗೊತ್ತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಹೇಳುವಂತೆ, ಕೇವಲ ಮಂಗಳಾರತಿ ಸಮಯದಲ್ಲಿ ಸುಮಾರು ಹತ್ತು ನಿಮಿಷಗಳ ಅವಧಿಗೆ ಮಾತ್ರ ಭಜನೆಗಳನ್ನು ಹಾಕಲಾಗುತ್ತೆ. ಮಂಗಳಾರತಿ, ಪೂಜೆಗೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

