ಮೈಸೂರು; ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು

ಮೈಸೂರು; ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು

ಆಯೇಷಾ ಬಾನು
|

Updated on: Jun 30, 2024 | 12:38 PM

ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು ನದಿ, ಜಲಪಾತಗಳೆಲ್ಲ ತುಂಬಿ ಹರಿಯುತ್ತಿವೆ. ಕೆ.ಆರ್.ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಚುಂಚನಕಟ್ಟೆ ಫಾಲ್ಸ್ ಪ್ರವಾಸಿಗರನ್ನು ಸೆಳೆಯುತ್ತಿದೆ.

ಮೈಸೂರು, ಜೂನ್.30: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ (Karnataka Rains) ಹಿನ್ನೆಲೆ ಧನುಷ್ ಕೋಟಿ ಜಲಪಾತ (Dhanushkoti Falls) ಭೋರ್ಗರೆದಿದೆ. ಕೆ.ಆರ್.ನಗರದ ಚುಂಚನಕಟ್ಟೆ (Chunchanakatte) ಬಳಿ ಇರುವ ಧನುಷ್ಕೋಟಿ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರುದ್ರ ರಮಣೀಯ ದೃಶ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗುತ್ತಿದ್ದಾರೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಚುಂಚನಕಟ್ಟೆ ಫಾಲ್ಸ್ ಪ್ರವಾಸಿಗರನ್ನು ಸೆಳೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ