ಗಣೇಶ ಕೇವಲ ಬಿಜೆಪಿ ಆಸ್ತಿಯಲ್ಲ,ಎಲ್ಲರ ಆಸ್ತಿ, ಎಲ್ಲಿ ಬೇಕಾದ್ರೂ ಹೋಗಲಿ: ಸಿಎಂ

Updated on: Sep 13, 2026 | 3:27 PM

ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಟಿ. ನರಸೀಪುರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದಾರೆ. ಅಲ್ಲದೇ ಇನ್ಸ್​​ಪೆಕ್ಟರ್​​​ನ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಂದೆಡೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅಶಾಂತಿ ಮೂಡಿಸೋಕೆ ದೊಡ್ಡ ಕುತಂತ್ರ ನಡೆಯುತ್ತಿದೆ. ದೊಡ್ಡ ಕುತಂತ್ರ ನಡೆಯುತ್ತಿದೆ ಎಂದು ನಮಗೆ ಅರಿವಿದೆ. ಅವರು ಏನೂ ಬೇಕಾದ್ರೂ ಮಾಡಲಿ. ಪೊಲೀಸರಿಗೆ ಹುಷಾರಾಗಿರಿ ಎಂದು ನಾವು ಹೇಳಿದ್ದೇವೆ. ಗಣೇಶ ಕೇವಲ ಬಿಜೆಪಿ ಆಸ್ತಿಯಲ್ಲ, ಗಣೇಶ ಎಲ್ಲರ ಆಸ್ತಿ. ಎಲ್ಲಿ ಬೇಕಾದ್ರೂ ಹೋಗಲಿ, ಏನು ಬೇಕಾದ್ರೂ ಮಾಡಲಿ. ಅವರ ಪರಿಮಿತಿಯಲ್ಲಿ ಅವರು ಮಾಡಲಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು (ಸೆಪ್ಟೆಂಬರ್ 13): ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಟಿ. ನರಸೀಪುರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದಾರೆ. ಅಲ್ಲದೇ ಇನ್ಸ್​​ಪೆಕ್ಟರ್​​​ನ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಂದೆಡೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅಶಾಂತಿ ಮೂಡಿಸೋಕೆ ದೊಡ್ಡ ಕುತಂತ್ರ ನಡೆಯುತ್ತಿದೆ. ದೊಡ್ಡ ಕುತಂತ್ರ ನಡೆಯುತ್ತಿದೆ ಎಂದು ನಮಗೆ ಅರಿವಿದೆ. ಅವರು ಏನೂ ಬೇಕಾದ್ರೂ ಮಾಡಲಿ. ಪೊಲೀಸರಿಗೆ ಹುಷಾರಾಗಿರಿ ಎಂದು ನಾವು ಹೇಳಿದ್ದೇವೆ. ಗಣೇಶ ಕೇವಲ ಬಿಜೆಪಿ ಆಸ್ತಿಯಲ್ಲ, ಗಣೇಶ ಎಲ್ಲರ ಆಸ್ತಿ. ಎಲ್ಲಿ ಬೇಕಾದ್ರೂ ಹೋಗಲಿ, ಏನು ಬೇಕಾದ್ರೂ ಮಾಡಲಿ. ಅವರ ಪರಿಮಿತಿಯಲ್ಲಿ ಅವರು ಮಾಡಲಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲಾ ಹಿಂದೂಗಳು ಅಲ್ಲವಾ, ಅವರದ್ದೆಲ್ಲಾ ಬರೀ ನಾಟಕ. ರಾಮನ ದುಡ್ಡೇ ಹೊಡೆದು ಬಿಟ್ಟಿದ್ದಾರಲ್ಲ. ನಿಮ್ಮ ಬೆವರೂ ಉಪ್ಪು, ನನ್ನ ಬೆವರೂ ಉಪ್ಪು.ಅವರದ್ದೇನಾದರೂ ಸಪರೇಟ್ ಇದೆಯಾ ಬ್ಲಡ್ಡು? ಎಲ್ಲ ಜಾತಿಗಳನ್ನೂ ಒಳಗೊಂಡಂತೆ ಧರ್ಮ ನಮ್ಮದು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಕರ್ನಾಕಟದ ಮತ್ರಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More