ಸದನದಲ್ಲಿ ‘ವಾಲ್ಮೀಕಿ’ ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗನೇ ಇಲ್ಲ

|

Updated on: Jul 16, 2024 | 5:32 PM

ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಇಂದುನ(ಜುಲೈ 16) ಎರಡನೇ ದಿನವೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ್ದೇ ಸದ್ದು ಜೋರಾಗಿದೆ. ವಿಧಾನಸಭೆ ಮತ್ತು ವಿಧಾನಪರಿಷತ್​ ಕಲಾಪದಲ್ಲೂ ಸಹ ವಾಲ್ಮೀಕಿ ಹಗರಣದ ಬಗ್ಗೆ ವಿಪಕ್ಷ ಬಿಜೆಪಿ-ಜೆಡಿಎಸ್ ಮತ್ತು ಆಡಳಿತರೂಢ ಕಾಂಗ್ರೆಸ್​ ನಡುವೆ ಮಾತಿನ ಯುದ್ಧವೇ ನಡೆದಿದೆ. ನಾಯಕರು ಪರಸ್ಪರ ಮಾತಿಗಿಳಿದಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ಆಲಿಸುತ್ತಾ ಫುಲ್ ಅರಾಮ್ ಆಗಿ ಕುಳಿತುಕೊಂಡಿರುವುದು ಕಂಡುಬಂತು.

ಬೆಂಗಳೂರು, (ಜುಲೈ 16): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಧಾನಮಂಡಲ ಅಧಿವೇಶನದಲ್ಲೂ ಸಹ ಪ್ರತಿಧ್ವನಿಸಿದ್ದು, ಬಿಜೆಪಿ ನಾಯಕರು ಇದನ್ನು ಇಟ್ಟುಕೊಂಡು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇನ್ನು ಪರಿಷತ್​ನಲ್ಲೂ ಸಹ ಈ ಹರಣದ ಬಗ್ಗೆ ಬಿಜೆಪಿಯ ಸಿಟಿ ರವಿ ಪ್ರಸ್ತಾಪಿಸಿದ್ದು, ಭಾರಿ ಗದ್ದಲ ಉಂಟಾಗಿದೆ. ಇದರಿಂದ ಪರಿಷತ್ ಕಲಾಪಟವನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಇನ್ನು ವಿಧಾನಸಭೆ ಕಲಾಪದಲ್ಲಿ ಬಿಜೆಪಿಯಿಂದ ಸುನಿಲ್ ಕುಮಾರ್, ಅಶ್ವತ್ಥ್ ನಾರಾಯಣ ಸೇರಿದಂತೆ ಇತರ ಕೆಲ ಶಾಸರು ಎದ್ದು ನಿಂತು ಸರ್ಕಾರದ ವಿರುದ್ಧ ಮುಗಿಬಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತರೂಢ ಕಾಂಗ್ರೆಸ್​​ನಿಂದ ಗೃಹ ಸಚಿವ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ದಿನೇಶ್​ ಗುಂಡೂರಾವ್ ಸೇರಿದಂತೆ ಶಾಸಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಆದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಮ್ಮ ಸ್ಥಾನದಲ್ಲಿ ಎಲ್ಲಾವನ್ನು ಕೇಳಿಸಿಕೊಳ್ಳುತ್ತಾ ಫುಲ್ ರಿಲ್ಯಾಕ್ಸ್​ ಮೂಡ್​ನಲ್ಲಿ ಕುಳಿತುಕೊಂಡಿರುವುದು ಕಂಡುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on