AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಉದಿತ್ ರಾಜ್ ಪೊಲೀಸ್ ವಶಕ್ಕೆ

ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಉದಿತ್ ರಾಜ್ ಪೊಲೀಸ್ ವಶಕ್ಕೆ

ಸುಷ್ಮಾ ಚಕ್ರೆ
|

Updated on: Sep 01, 2026 | 8:37 PM

Share

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ದೆಹಲಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ 'ಆಲ್ ಇಂಡಿಯಾ ಅನ್‌ಆರ್ಗನೈಸ್ಡ್ ವರ್ಕರ್ಸ್ ಆ್ಯಂಡ್ ಎಂಪ್ಲಾಯೀಸ್ ಕಾಂಗ್ರೆಸ್' (KKC) ರಾಷ್ಟ್ರೀಯ ಅಧ್ಯಕ್ಷ ಡಾ. ಉದಿತ್ ರಾಜ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು 'ಡೋಮಾ ಪರಿಸಂಘ' ಒಕ್ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯ ವೇಳೆ ಕೇಶವ್ ಕುಂಜ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗುತ್ತಾ ಪುರಾತನ ಗ್ರಂಥವಾದ ಮನುಸ್ಮೃತಿಯ ಪ್ರತಿಗಳನ್ನು ಹಾಗೂ ಆರ್‌ಎಸ್‌ಎಸ್‌ನ ಸಮವಸ್ತ್ರಗಳನ್ನು ಸುಟ್ಟು ಹಾಕಿದರು.

ನವದೆಹಲಿ, ಸೆಪ್ಟೆಂಬರ್ 1: ದೆಹಲಿಯ ಕೇಶವ್ ಕುಂಜ್‌ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ದೆಹಲಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ‘ಆಲ್ ಇಂಡಿಯಾ ಅನ್‌ಆರ್ಗನೈಸ್ಡ್ ವರ್ಕರ್ಸ್ ಆ್ಯಂಡ್ ಎಂಪ್ಲಾಯೀಸ್ ಕಾಂಗ್ರೆಸ್’ (KKC) ರಾಷ್ಟ್ರೀಯ ಅಧ್ಯಕ್ಷ ಡಾ. ಉದಿತ್ ರಾಜ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ‘ಡೋಮಾ ಪರಿಸಂಘ’ ಒಕ್ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯ ವೇಳೆ ಕೇಶವ್ ಕುಂಜ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗುತ್ತಾ ಪುರಾತನ ಗ್ರಂಥವಾದ ಮನುಸ್ಮೃತಿಯ ಪ್ರತಿಗಳನ್ನು ಹಾಗೂ ಆರ್‌ಎಸ್‌ಎಸ್‌ನ ಸಮವಸ್ತ್ರಗಳನ್ನು ಸುಟ್ಟು ಹಾಕಿದರು.

ಪ್ರತಿಭಟನಾಕಾರರು “ದೇಶವು ಭಾರತದ ಸಂವಿಧಾನದಿಂದ ನಡೆಯುತ್ತದೆಯೇ ಹೊರತು ಮನುಸ್ಮೃತಿಯಿಂದಲ್ಲ” ಎಂದು ಘೋಷಣೆಗಳನ್ನು ಕೂಗಿದರು. “ಆರ್‌ಎಸ್‌ಎಸ್ ಮತ್ತು ಕೇಂದ್ರ ಸರ್ಕಾರವು ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯ ತತ್ವಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿವೆ” ಎಂದು ಉದಿತ್ ರಾಜ್ ಆರೋಪಿಸಿದರು. ಬಳಿಕ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us