Karnataka Budget Session: ಅಶೋಕ ಬಳಸಿದ ಪದಗಳಿಗೆ ಕ್ಷಮೆ ಕೇಳಬೇಕೆನ್ನುವ ನರೇಂದ್ರ ಸ್ವಾಮಿ ತಮ್ಮ ಶಬ್ದಾವಳಿಗೂ ಸಾರಿ ಅನ್ನಬೇಕು!
ಸದನದ ಕಲಾಪದಲ್ಲಿ ಯಾವ ಪದ ಅವಾಚ್ಯವೋ ಯಾವುದು ವಾಚ್ಯವೋ ಗೊತ್ತಾಗುತ್ತಿಲ್ಲ. ಅಶೋಕ ಮನೆಹಾಳು ಸರ್ಕಾರ ಅಂತ ಹೇಳಿದರೆ ನರೇಂದ್ರ ಸ್ವಾಮಿ ಅಯೋಗ್ಯ, ನಾಲಾಯಕ್ ಪದಗಳನ್ನು ಬಳಸುತ್ತಾರೆ. ನರೇಂದ್ರ ಸ್ವಾಮಿ ಮಾತಾಡುವಾಗ ತಮ್ಮ ಮೈಕನ್ನು ಆಫ್ ಮಾಡಿಕೊಂಡಿರದಿದ್ದರೆ ಮತ್ಯಾವ ಪದಗಳನ್ನು ಬಳಸಿದರೆನ್ನುವುದು ನಮಗೆಲ್ಲ ಕೇಳಿಸುತಿತ್ತು!
ಬೆಂಗಳೂರು, ಮಾರ್ಚ್ 11: ಸದನದಲ್ಲಿ ವಿರೋಧಪಕ್ಷದ ನಾಯಕ ಆರ್ ಅಶೋಕ ಅವರು ಕಾಂಗ್ರೆಸ್ ಸರ್ಕಾರವನ್ನು ಮನೆ ಹಾಳು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ಮಂತ್ರಿಗಳು ಮತ್ತು ಶಾಸಕರು ರೊಚ್ಚಿಗೆದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ (Narendra Swamy) ಅವರಂತೂ ವಿಪಕ್ಷ ನಾಯಕನ ವಿರುದ್ಧ ಬಾಯಿ ಹರಿಬಿಟ್ಟರು. ನಾಲಾಯಕ್, ಯೋಗ್ಯತೆ ಇಲ್ಲ ಮೊದಲಾದ ಪದಪುಂಜಗಳು ಅವರ ಬಾಯಿಂದ ಹರಿದುಬಂದವು. ಅಶೋಕ ತಾವು ಬಳಸಿದ ಪದಗಳಿಗೆ ಸದನದ ಕ್ಷಮೆ ಕೇಳಬೇಕು ಎಂದು ನರೇಂದ್ರ ಸ್ವಾಮಿ ಆಗ್ರಹಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ಸಚಿವ ಮಹೇದವಪ್ಪಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಲಾಗುತ್ತಿಲ್ಲ: ಅಶೋಕ