ಭಗವದ್ಗೀತೆ ಮೇಲೆ ತನ್ನೊಂದಿಗೆ ಚರ್ಚೆಗೆ ಬರಲು ಅಶೋಕ್, ಸಿಟಿ ರವಿ ಮತ್ತು ಯತ್ನಾಳ್ ಗೆ ಪ್ರದೀಪ್ ಈಶ್ವರ್ ಪಂಥಾಹ್ವಾನ

Updated on: Feb 22, 2025 | 3:04 PM

ಸಿಎಂ, ಡಿಸಿಎಂ ಮತ್ತು ಹೋಮ್ ಮಿನಿಸ್ಟರ್ ಬಗ್ಗೆ ಬಿಜೆಪಿ ನಾಯಕರು ಮಾತಾಡಿದರೆ ತಾವು ಸುಮ್ಮನಿರಲ್ಲ, ತಮ್ಮ ಹಿರಿಯ ನಾಯಕರಿಗಿರುವಷ್ಟು ತಾಳ್ಮೆ ತಮಗಿಲ್ಲ, ಆದರೆ ಪ್ರತಾಪ್ ಸಿಂಹ ಅಷ್ಟೆಲ್ಲ ಮಾತಾಡಿದರೂ ಪರಮೇಶ್ವರ್ ಸುಮ್ಮನಿದ್ದಿದ್ದು ಕಂಡಾಗ, ಹಿರಿಯ ನಾಯಕರು ತನ್ನ ಮತ್ತು ಪ್ರತಾಪ್ ಸಿಂಹನ ರೀತಿ ಯೋಚನೆ ಮಾಡಲ್ಲ ಅನ್ನೋದು ಮನವರಿಕೆಯಾಯಿತು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು: ಆರ್ ಅಶೋಕ, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರೆಲ್ಲ ತಾವೇ ದೊಡ್ಡ ಹಿಂದೂಗಳ ಹಾಗೆ ಪೋಸು ಕೊಡುತ್ತಾರೆ, ಅಸಲಿಗೆ ಇವರು ಡೋಂಗಿ ಹಿಂದೂಗಳು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಇವರು ಯಾವತ್ತಾದರೂ ಭಗವದ್ಗೀತೆಯನ್ನು ಓದಿದ್ದಾರಾ? ಭಗವದ್ಗೀತೆಯ ಮೇಲೆ ಚರ್ಚೆಗೆ ಬನ್ನಿ ಅಂತ ತಾನು ರವಿ, ಆಶೋಕ ಮತ್ತು ಯತ್ನಾಳ್ ಅವರಿಗೆ ನೇರವಾಗಿ ಸವಾಲು ಹಾಕುತ್ತೇನೆ ಎಂದ ಪ್ರದೀಪ್, ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಎರಡು ವರ್ಷಗಳಿಂದ ಬಂದ್ ಅಗಿತ್ತು, ಪುನರಾರಂಭಕ್ಕೆ ನಿನ್ನೆ ಅನುಮತಿ ಸಿಕ್ಕಂತಿದೆ, ಅವರ ಬಳಿ ಶುಗರ್ ಫ್ಯಾಕ್ಟರಿ ಇದ್ದರೆ ಉಳಿದವರಿಗೆ ಮೈಯಲ್ಲೇ ಶುಗರ್ ಇದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಇ ಖಾತಾಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ