ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸಿದ್ದರಾಮಯ್ಯ ಮಾತಾಡಲು ಪೋಡಿಯಂಗೆ ಬರುತ್ತಿದ್ದಂತೆಯೇ ಜೋರು ಚಪ್ಪಾಳೆ, ಶಿಳ್ಳೆ
ಸಿದ್ದರಾಮಯ್ಯ ಭಾಷಣ ಮಾಡಲು ಆಗಮಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಮುಖ್ಯಮಂತ್ರಿಯವರ ಕಿವಿಯಲ್ಲಿ ಎರಡೆರಡು ಬಾರಿ ಏನೋ ಹೇಳುವುದನ್ನು ನೋಡಬಹುದು. ಪ್ರಾಯಶಃ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್ ಮತ್ತು ಖುದ್ದು ಸುರ್ಜೆವಾಲಾ ದೆಹಲಿಗೆ ಹೋಗಬೇಕಿರುವುದರಿಂದ ಚಿಕ್ಕ ಭಾಷಣ ಮಾಡಿ ಅಂತ ಹೇಳಿರಬಹುದು.
ಬೆಳಗಾವಿ: ನಗರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಡಲು ವೇದಿಕೆಗೆ ಬರುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆ, ಶಿಳ್ಳೆ ಮತ್ತು ಕೂಗಾಟ. ಸಿದ್ದರಾಮಯ್ಯ ಒಬ್ಬ ಜನಪ್ರಿಯ ನಾಯಕ ಮತ್ತು ಮಾಸ್ ಲೀಡರ್ ಎಂದು ವಿರೋಧ ಪಕ್ಷದ ನಾಯಕರೂ ಹೇಳುತ್ತಾರೆ. ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರದರ್ಶನ ಮಾಡಿದ್ದನ್ನು ನೋಡಿದವರು ಉತ್ತರ ಮತ್ತು ಕಿತ್ತೂರು ಕರ್ನಾಟಕದಲ್ಲ್ಲಿ ಸಿದ್ದರಾಮಯ್ಯಗಿರುವ ಜನಪ್ರಿಯತೆಯನ್ನು ಕಂಡು ದಂಗಾಗಿರಬಹುದು. ದೆಹಲಿ ನಾಯಕರು ವಾಪಸ್ಸು ತೆರಳಬೇಕಿರುವುದರಿಂದ ಭಾಷಣ ಬೇಗ ಮುಗಿಸುವುದಾಗಿ ಹೇಳುತ್ತಾ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಇಲ್ಲೂ ಮೊಳಗಿತು ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು!