Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣದ ಯಲಚಿಪಾಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಕುಮಾರಸ್ವಾಮಿ

ಚನ್ನಪಟ್ಟಣದ ಯಲಚಿಪಾಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 04, 2024 | 2:15 PM

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್​ಡಿಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಪರ ಇವತ್ತು ಸಹ ಕುಮಾರಸ್ವಾಮಿ ಮತಯಾಚನೆ ಮಾಡಿದರು. ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಪ್ರಚಾರ ಮಾಡಲು ಹೋಗದಿರುವುದು ಆಶ್ಚರ್ಯ ಮೂಡಿಸುತ್ತದೆ. ಪ್ರಚಾರ ಕೊನೆಗೊಳ್ಳಲು ಒಂದು ವಾರ ಮಾತ್ರ ಉಳಿದಿದೆ.

ರಾಮನಗರ: ಜೆಡಿಎಸ್ ಶಾಲುಗಳಿಗೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರ ಲೆಕ್ಕಚಾರ ತಪ್ಪಿತು ಅನಿಸುತ್ತದೆ. ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ ಇಂದು ಯಲಚಿಪಾಳ್ಯದಲ್ಲಿ ಮತಯಾಚನೆ ಮಾಡಿದರು. ಗ್ರಾಮದ ಹಲವು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರಿದರು. ಅವರನ್ನು ಪಕ್ಷದ ಶಲ್ಯ ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡ ಕುಮಾರಸ್ವಾಮಿಗೆ ಶಲ್ಯಗಳು ಕಮ್ಮಿಬಿದ್ದವು. ಬುದ್ಧಿ ಪ್ರಯೋಗಿಸಿದ ಶಾಸಕ ಸಾರಾ ಮಹೇಶ್ ಹೊದೆಸಿದ ಶಾಲುಗಳನ್ನೇ ವಾಪಸ್ಸು ಪಡೆದು ಕುಮಾರಸ್ವಾಮಿ ಕೈಗೆ ಕೊಡುತ್ತಾ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನಗಿಂತ ಮೃದು ಸ್ವಭಾವದವನಾಗಿರುವ ನಿಖಿಲ್ ನಿಮ್ಮ ಮನೆಮಗನಂತಿರುತ್ತಾನೆ: ಹೆಚ್ ಡಿ ಕುಮಾರಸ್ವಾಮಿ