Karnataka Budget Session: ಮೇಲ್ಮನೆಯಲ್ಲಿ ತಮ್ಮ ವರ್ತನೆಯಿಂದ ಸಭಾಪತಿ ಬಸವರಾಜ ಹೊರಟ್ಟಿ ನೊಂದುಕೊಳ್ಳುವಂತೆ ಮಾಡಿದ ಬಿಜೆಪಿ ಎಮ್ಮೆಲ್ಸಿಗಳು!

|

Updated on: Feb 21, 2024 | 7:04 PM

ಸಭಾಪತಿ ಹೊರಟ್ಟಿಯರು ಕಳೆದ ನಾಲ್ಕೂವರೆ ದಶಕಗಳಿಂದ ವಿಧಾನ ಪರಿಷತ್ ನಲ್ಲಿದ್ದಾರೆ, ಅತಿರಥ ಮಹಾರಥ ನಾಯಕರನ್ನು ಅವರು ನೋಡಿದ್ದಾರೆ, ಆದರೆ ಇವತ್ತು ಅವರು ಆಡಿದ ಮಾತನ್ನು ಕೇಳಿ. ಅವರಿಗೆ ಎಷ್ಟು ರೋಸಿಹೋಗಿತ್ತು, ಬಿಜೆಪಿ ಸದಸ್ಯರ ಮೇಲೆ ಯಾವ ಪರಿ ಹೇವರಿಕೆ ಉಂಟಾಗಿತ್ತು, ಎಷ್ಟು ಬೇಸರ ಮಾಡಿಕೊಂಡಿದ್ದರು ಅನ್ನೋದು ಅವರು ನೋವಲ್ಲಿ ಆಡಿದ ಮಾತಿನಿಂದ ಗೊತ್ತಾಗುತ್ತದೆ.

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಇಂದು ಬಿಜೆಪಿ ಸದಸ್ಯರು ನಡೆಸಿದ ಗೌಜು ಗದ್ದಲ ಗಲಾಟೆಯಿಂದ ಸಭಾಪತಿ ಬಸವರಾಜ ಹೊರಟ್ಟಿ ಅಕ್ಷರಶಃ ರೋಸಿಹೋದರು ಮತ್ತು ಬಹಳ ಬೇಸರ ಮಾಡಿಕೊಂಡರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರು ಪದೇಪದೆ ಅಡ್ಡಿಪಡಿಸಿ ಅವರಿಗೆ ಮಾತು ಮುಂದುವರಿಸುವ ಅವಕಾಶವಿಲ್ಲದಂತೆ ಮಾಡಿದರು. ಸಭಾಪತಿ ಹೊರಟ್ಟಿಯರು ಕಳೆದ ನಾಲ್ಕೂವರೆ ದಶಕಗಳಿಂದ ವಿಧಾನ ಪರಿಷತ್ ನಲ್ಲಿದ್ದಾರೆ, ಅತಿರಥ ಮಹಾರಥ ನಾಯಕರನ್ನು ಅವರು ನೋಡಿದ್ದಾರೆ, ಆದರೆ ಇವತ್ತು ಅವರು ಆಡಿದ ಮಾತನ್ನು ಕೇಳಿ. ಅವರಿಗೆ ಎಷ್ಟು ರೋಸಿಹೋಗಿತ್ತು, ಬಿಜೆಪಿ ಸದಸ್ಯರ ಮೇಲೆ ಯಾವ ಪರಿ ಹೇವರಿಕೆ ಉಂಟಾಗಿತ್ತು, ಎಷ್ಟು ಬೇಸರ ಮಾಡಿಕೊಂಡಿದ್ದರು ಅನ್ನೋದು ಅವರು ನೋವಲ್ಲಿ ಆಡಿದ ಮಾತಿನಿಂದ ಗೊತ್ತಾಗುತ್ತದೆ.

ಎಷ್ಟು ಸಲ ಅಂತ ಹೇಳೋದು ನಿಮಗೆ, ವಿರೋಧ ಪಕ್ಷದ ನಾಯಕರಲ್ಲಿ ಸ್ವಲ್ಪ ತಿಳುವಳಿಕೆ ಇರಬೇಕು, ಕಳೆದ 44 ವರ್ಷಗಳಿಂದ ನಾನು ವಿಧಾನ ಪರಿಷತ್ ನಲ್ಲಿದ್ದೇನೆ, ಆದರೆ ನಿಮ್ಮಂಥ ಬೇಜವ್ದಾರಿ ವಿರೋಧ ಪಕ್ಷದ ನಾಯಕರನ್ನು ನಾನು ಯಾವತ್ತೂ ನೋಡಿಲ್ಲ, ಬೇರೆಯವರ ಆಡುವ ಮಾತಿಗೆ ಕಿಮ್ಮತ್ತು ಕೊಡೋದು ನಿಮಗೆ ಗೊತ್ತಿಲ್ಲ, ನಿಮ್ಮ ಮಾತುಗಳಿಗೆ ಜನ ನಗ್ತಾರೆ, ಹೋಗಿ ಆಚೆ, ಎಂದು ಹೊರಟ್ಟಿ ಕೋಪ, ನೋವು, ಹತಾಶೆ ಮತ್ತು ಬೇಸರದಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ