Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಯಂತೆ ನಂಗೂ ಏಕವಚನದಲ್ಲಿ ಮಾತಾಡಲು ಬರುತ್ತೆ, ಸಮಯ ಬಂದಾಗ ಮಾತಾಡ್ತೀನಿ: ಡಿಕೆ ಸುರೇಶ್

ಕುಮಾರಸ್ವಾಮಿಯಂತೆ ನಂಗೂ ಏಕವಚನದಲ್ಲಿ ಮಾತಾಡಲು ಬರುತ್ತೆ, ಸಮಯ ಬಂದಾಗ ಮಾತಾಡ್ತೀನಿ: ಡಿಕೆ ಸುರೇಶ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 21, 2024 | 5:15 PM

ವಕೀಲರ ಪ್ರತಿಭಟನೆ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರ ಕುಮಾರಸ್ವಾಮಿ ಮತ್ತು ಅಶೋಕ ಮಾಡಿದ್ದಾರೆ, ಕುಮಾರಸ್ವಾಮಿಯಂತೆ ತನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ, ಸಮಯ ಬಂದಾಗ ಹಾಗೆ ಮಾತಾಡ್ತೀನಿ ಹೋಗಿ ‘ಅವನಿಗೆ’ ಹೇಳಿ ಅಂತ ಮಾಧ್ಯಮದವರಿಗೆ ಹೇಳುತ್ತಾರೆ.

ರಾಮನಗರ: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಸಹೋದರರ (DK brothers) ನಡುವಿನ ವೈಷಮ್ಯ ದಿನಗಳೆದಂತೆ ಉಲ್ಬಣಿಸುತ್ತಿದೆ. ರಾಮನಗರದಲ್ಲಿ ವಕೀಲರು ಮಾಡುತ್ತಿದ್ದ ಪ್ರತಿಭಟನೆ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ನಿನ್ನೆ ರಾತ್ರಿ ಸಮಯ ಹೋಗಿ ಬೆಂಬಲ ಸೂಚಿಸಿದ್ದು, ಧರಣಿಯಲ್ಲಿ ಕೂತಿದ್ದು ರಾಜಕೀಯವಲ್ಲದೆ ಮತ್ತೇನೂ ಅಲ್ಲ. ಗೃಹ ಸಚಿವ ಜಿ ಪರಮೇಶ್ವರ್ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರೂ ಅಶೋಕ ಹಾಗೂ ಕುಮಾರಸ್ವಾಮಿ ರಾಮನಗರಕ್ಕೆ ಬಂದಿದ್ದರು. ಮಾಧ್ಯಮಗಳಿಗೆ ಹೇಳಿಕ ನೀಡುವಾಗ ಕುಮಾರಸ್ವಾಮಿ,  ಡಿಕೆ ಸುರೇಶ್ (DK Suresh) ಬಗ್ಗೆ ಮಾತಾಡುತ್ತಾ ‘ಅವನ್ಯಾವ್ನೋ ಎಂಪಿ ಎಲ್ಲೊಂದ್ಲೋ ಫೋನ್ ಮಾಡ್ತಾನೆ’ ಅಂತ ಏಕವಚನದಲ್ಲಿ ಜರಿದಿದ್ದರು. ಅದನ್ನು ಸುರೇಶ್ ಗಮನಕ್ಕೆ ತಂದಾಗ, ವಕೀಲರ ಪ್ರತಿಭಟನೆ ರಾಜಕೀಯಕ್ಕೆ ಬಳಸಿಕೊಳ್ಳುವ ಕುತಂತ್ರ ಕುಮಾರಸ್ವಾಮಿ ಮತ್ತು ಅಶೋಕ ಮಾಡಿದ್ದಾರೆ, ಕುಮಾರಸ್ವಾಮಿಯಂತೆ ತನಗೂ ಏಕವಚನದಲ್ಲಿ ಮಾತಾಡಲು ಬರುತ್ತದೆ, ಸಮಯ ಬಂದಾಗ ಹಾಗೆ ಮಾತಾಡ್ತೀನಿ ಹೋಗಿ ‘ಅವನಿಗೆ’ ಹೇಳಿ ಅಂತ ಮಾಧ್ಯಮದವರಿಗೆ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ