‘ಈ ಸ್ಥಿತಿಯಲ್ಲಿ ನಾನು ನೋಡಬೇಕಿತ್ತಾ’: ದರ್ಶನ್​ ಬಗ್ಗೆ ವಿನೋದ್​ ರಾಜ್​ ಮರುಕ

Edited By:

Updated on: Jul 22, 2024 | 9:52 PM

ದರ್ಶನ್​ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದಿರುವ ವಿನೋದ್​ ರಾಜ್​ ಬಹಳ ನೋವಿನೊಂದಿಗೆ ಮಾತನಾಡಿದ್ದಾರೆ. ‘ನೋವು ಮತ್ತು ಕಣ್ಣೀರು ಬಿಟ್ಟರೆ ನನಗೆ ಇನ್ನೇನೂ ಗೊತ್ತಾಗುತ್ತಿಲ್ಲ. ಇದು ಒಬ್ಬರ ಕಣ್ಣೀರು ಅಲ್ಲ’ ಎಂದ ಅವರು ಹೇಳಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಈ ಪ್ರಕರಣದಿಂದ ಹೊರಬಂದು ತಲೆ ಎತ್ತಿ ನಡೆಯುವಂತೆ ಆಗಲಿ ಎಂದಿದ್ದಾರೆ ವಿನೋದ್​ ರಾಜ್​.

ನಟ ದರ್ಶನ್​ ಅವರನ್ನು ನೋಡಲು ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಚಿತ್ರರಂಗದ ಆಪ್ತರು ಕೂಡ ಜೈಲಿಗೆ ಬಂದು ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಇಂದು (ಜುಲೈ 22) ನಟ ವಿನೋದ್​ ರಾಜ್​ ಅವರು ಜೈಲಿಗೆ ಬಂದಿದ್ದಾರೆ. ಅವರ ಜೊತೆ ವಿಜಯಲಕ್ಷ್ಮಿ, ದಿನಕರ್​ ತೂಗುದೀಪ್​ ಕೂಡ ಇದ್ದರು. ಅಲ್ಲಿ ನಡೆದ ಮಾತುಕಥೆಯ ಬಗ್ಗೆ ವಿನೋದ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘5 ಜನ ಹೋಗಿದ್ದೆವು. ಜೈಲಿನ ನಿಯಮಗಳು ತುಂಬ ಕಟ್ಟುನಿಟ್ಟಾಗಿವೆ. ವಿಜಯಲಕ್ಷ್ಮಿ ಅವರು ಕೂಡ ಹೆಚ್ಚೇನೂ ಮಾತನಾಡಿಲ್ಲ. ಅವರಿಗೆ ಏನೂ ತಿಳಿಯುತ್ತಿಲ್ಲ. ಅವರ ವಕೀಲರು ಮಾತನಾಡಿದರು ಅಷ್ಟೇ. ಈ ಸ್ಥಿತಿಯಲ್ಲಿ ನಾನು ದರ್ಶನ್​ ಅವರನ್ನು ನೋಡಬೇಕಿತ್ತಾ? ನನ್ನ ಕಣ್ಣುಗಳನ್ನೇ ನನಗೆ ನಂಬೋಕೆ ಆಗುತ್ತಿಲ್ಲ. ಆದರೆ ನಂಬಲೇಬೇಕಾದ್ದು ಅನಿವಾರ್ಯ ಆಯಿತು’ ಎಂದಿದ್ದಾರೆ ವಿನೋದ್​ ರಾಜ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More