ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್​; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು

ದಿನದಿಂದ ದಿನಕ್ಕೆ ರೇಣುಕಾ ಸ್ವಾಮಿ ಕೊಲೆ ಕೇಸ್​ನ ತನಿಖೆ ತೀವ್ರಗೊಳ್ಳುತ್ತಿದೆ. ದರ್ಶನ್​ ಸೇರಿದಂತೆ ಎಲ್ಲ ಆರೋಪಿಗಳಿಗೆ ನೂರಾರು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ವಿವಿಧ ಸ್ಥಳಗಳಲ್ಲಿ ಮಹಜರು ಮಾಡಲಾಗಿದೆ. ಇಂದು (ಜೂ.17) ದರ್ಶನ್​ ಮಹಜರಿಗೆ ತೆರಳುವಾಗಿ ಮಂಕಾಗಿದ್ದು ಕಂಡುಬಂತು. ಪೊಲೀಸ್​ ಭಾಷೆಯಲ್ಲಿ ತನಿಖೆ ಶುರುವಾದಾಗ ನಟನ ವರಸೆ ಬದಲಾಗಿದೆ.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಕೇಸ್​ನಲ್ಲಿ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ (Pavithra Gowda) ಮುಂತಾದವರ ಪೊಲೀಸ್​ ಕಸ್ಟಡಿ ಮುಂದುವರಿದಿದೆ. ಹತ್ಯೆಗೆ ಸಂಬಂಧಿಸಿದ ಎಲ್ಲ ಸ್ಥಳಗಳಿಗೆ ತೆರಳಿ ಪೊಲೀಸರು ಮಹಜರು ಮಾಡುತ್ತಿದ್ದಾರೆ. ದರ್ಶನ್​ ಮತ್ತು ಗ್ಯಾಂಗ್​ ಪಾರ್ಟಿ ಮಾಡಿದ ಪಬ್​ಗೂ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಇಂದು (ಜೂನ್​ 17) ಮಹಜರು ಸಲುವಾಗಿ ಪೊಲೀಸ್​ ವ್ಯಾನ್​ ಹತ್ತಿದ ದರ್ಶನ್ (Darshan)​ ಮಂಕಾಗಿದ್ದು ಕಂಡುಬಂತು. ಅರೆಸ್ಟ್​ ಆದ ಆರಂಭದಲ್ಲಿ ಗತ್ತು ತೋರಿಸುತ್ತಿದ್ದ ದರ್ಶನ್​ ವರಸೆ ಈಗ ಬದಲಾಗಿದೆ ಎಂಬ ಮಾಹಿತಿ ಇದೆ. 2ನೇ ಬಾರಿಗೆ ಪೊಲೀಸ್​ ಕಸ್ಟಡಿ ಮುಂದುವರಿದ ಬಳಿಕ ತನಿಖೆಯ ರೀತಿ ಬದಲಾಗಿದೆ. ಪೊಲೀಸ್​ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕೆ ದರ್ಶನ್​ ಸೈಲೆಂಟ್​ ಆಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಆ ಎಲ್ಲ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಕೇಳಿದಾಗ ‘ನನ್ನಿಂದ ತಪ್ಪಾಗಿದೆ. ಬಿಟ್ಟು ಬಿಡಿ’ ಎಂದು ದರ್ಶನ್​ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us