AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್-ಪವಿತ್ರಾ ಮದುವೆಯಾಗಿದ್ರಾ? 10 ವರ್ಷಗಳ ಹಿಂದಿನ ಫೋಟೋ ವೈರಲ್

ದರ್ಶನ್-ಪವಿತ್ರಾ ಮದುವೆಯಾಗಿದ್ರಾ? 10 ವರ್ಷಗಳ ಹಿಂದಿನ ಫೋಟೋ ವೈರಲ್

ರಾಜೇಶ್ ದುಗ್ಗುಮನೆ
|

Updated on: Oct 31, 2025 | 11:51 AM

Share

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದವರು. ಕಳೆದ ಒಂದು ವರ್ಷಗಳಿಂದ ಇವರ ಹೆಸರು ಸಾಕಷ್ಟು ಚಾಲ್ತಿಯಲ್ಲಿ ಇದೆ. ಈಗ ಇವರು ಸತಿ-ಪತ್ನಿಯರೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಇದಕ್ಕೆ ಕಾರಣ ಆಗಿದ್ದು ದರ್ಶನ್ ವೈರಲ್ ಫೋಟೋ.

ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ವಾಸವಿದ್ದರು. ಇವರು ವಿವಾಹ ಆಗಿದ್ದರೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದ್ದು ಇದೆ. ಆದರೆ, ಇದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಈಗ ಇವರ ಹೊಸ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಇವರು ಸತಿ-ಪತಿ ರೀತಿ ಕಾಣಿಸಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ದರ್ಶನ್ ಪವಿತ್ರ ಮ್ಯಾರೇಜ್ ಫೋಟೋಸ್ ಅಂತ ಒಂದು ರೀಲ್ ವಿಡಿಯೋ ವೈರಲ್ ಆಗಿದೆ. ಪವಿತ್ರಾ ಕತ್ತಲ್ಲಿ ಅರಿಷಿಣ ದಾರ ಇದೆ. ಮದುವೆಯ ಉಡುಪಿನಲ್ಲಿ ದರ್ಶನ್ ಹಾಗೂ ಪವಿತ್ರಾ ಕಾಣಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ತೆಗ್ದಿರೋ ಫೋಟೋಗಳು ಇವಾಗಿವೆ. ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಪೆಟ್ಟಾಗಿತ್ತು. ಆಗ ದರ್ಶನ್​ಗೆ ಪವಿತ್ರಾ ಊಟ ಮಾಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More