AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 08, 2026 | 1:43 PM

Share

ದಾವಣಗೆರೆ ದಕ್ಷಿಣ ಉಪಚುನಾವಣೆ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಮತಗಟ್ಟೆ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. 1430 ಸಿಬ್ಬಂದಿಗೆ ಸ್ಥಳದಲ್ಲೇ ವೈದ್ಯಕೀಯ ತಪಾಸಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಹೆಚ್ಚಿಸಲು ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಅಸ್ವಸ್ಥರಿಗೆ ಉಚಿತ ವಾಹನ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸಿದೆ.

ದಾವಣಗೆರೆ, ಏಪ್ರಿಲ್ 8: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಈ ಚುನಾವಣೆಯಲ್ಲಿ ಭಾಗವಹಿಸುವ 1430 ಮಂದಿ ಚುನಾವಣಾ ಸಿಬ್ಬಂದಿಗಳ ಆರೋಗ್ಯ ಸುರಕ್ಷತೆಗೆ ಜಿಲ್ಲಾಡಳಿತ ವಿಶೇಷ ಗಮನ ಹರಿಸಿದೆ. ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತಗಟ್ಟೆಗಳಲ್ಲೇ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆಗಳಿಂದ ಮತಗಟ್ಟೆಗೆ ಬರಲು ಕಷ್ಟಪಡುವ ಮತದಾರರಿಗಾಗಿ ಜಿಲ್ಲಾಡಳಿತವು ಉಚಿತ ವಾಹನ ಸೌಲಭ್ಯವನ್ನು ಒದಗಿಸಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us