ಚಿಕ್ಕ ವಯಸ್ಸಿನಲ್ಲೇ ಶಾಸಕರಾದ ಸಮರ್ಥ್​ ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಎಂಟ್ರಿ

Edited By:

Updated on: May 07, 2026 | 6:59 PM

ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​ನಲ್ಲಿ ಗೆದ್ದ ಕಾಂಗ್ರೆಸ್​​ನ ಸಮರ್ಥ್ ಶಾಮನೂರು ವಿಧಾನಸೌಧಕ್ಕೆ ಭೇಟಿ ನೀಡಿದ್ದು, ಈ ವೇಳೆ ಮೆಟ್ಟಿಲಯಗಳಿಗೆ ನಮಸ್ಕರಿಸಿ ಶಕ್ತಿ ಕೇಂದ್ರದೊಳಗೆ ಪ್ರವೇಶಿಸಿದ್ದಾರೆ.

ಬೆಂಗಳೂರು, (ಮೇ 07): ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ (Davanagere South) ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು (Samarth Shamanur) ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಶಾಸಕರಾಗಿದ್ದು, ಗೆದ್ದ ಬಳಿಕ ಮೊದಲ ಬಾರಿಗೆ ಸಮರ್ಥ, ತಂದೆ ತಾಯಿ ಜೊತೆಗೆ ವಿಧಾನಸೌಧಕ್ಕೆ ಆಗಮಿಸಿದ್ದು, ಈ ವೇಳೆ ಮೆಟ್ಟಿಲುಗಳಿಗೆ ನಮಸ್ಕರಿಸಿ ವಿಧಾನಸೌಧದ ಒಳಗಡೆ ಪ್ರವೇಶಿಸಿದರು.

ಇದನ್ನೂ ನೋಡಿ: ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ:ತಂದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥ ಶಾಸಕ

Published on: May 07, 2026 06:48 PM
Follow Us