ಡಿಸಿಎಂ ಡಿಕೆ ಶಿವಕುಮಾರ್ ಮಾತಾಡುವ ಶೈಲಿ ಸದನದ ಗೌರವಕ್ಕೆ ತಕ್ಕುದ್ದಾಗಿದೆಯೇ?

|

Updated on: Jul 16, 2024 | 3:43 PM

ನಿಮಗೆ ನೆನಪಿರಬಹುದು, ಹಿಂದೆ ವಿಶ್ವೇಶ್ವರ ಹೆಗಡೆಯವರು ಸ್ಪೀಕರ್ ಆಗಿದ್ದಾಗ, ಸದನದಲ್ಲಿ ವಿರೋಧ ಪಕ್ಷದಲ್ಲಿದ್ದ ಶಿವಕುಮಾರ್ ಮತ್ತು ಆಡಳಿತ ಪಕ್ಷದ ಕೆಎಸ್ ಈಶ್ವರಪ್ಪ ನಡುವೆ ಜೋರಾಗಿ ಮಾತಿನ ಕಾಳಗ ನಡೆದಿತ್ತು. ಆಗ ಇಬ್ಬನ್ನು ಸಮಾಧಾನಪಡಿಸುವ ಭರದಲ್ಲಿ ಕಾಗೇರಿ, ಏಯ್ ಶಿವಕುಮಾರ್ ಅಂದಿದ್ದರು. ಅದನ್ನು ಶಿವಕುಮಾರ್ ನಮ್ಮ ಪ್ರತಿನಿಧಿ ಬಳಿ ನೋವಿನಿಂದ ಹೇಳಿಕೊಂಡಿದ್ದರು!

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿಕೊಳ್ಳದಿದ್ದರೆ ಅವರು ಬಳಸುವ ಭಾಷೆಯನ್ನೇ ವಿರೋಧ ಪಕ್ಷದ ನಾಯಕರು ಬಳಸಲಾರಂಭಿಸುತ್ತಾರೆ. ಸದನದಲ್ಲಿ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಮಾತಾಡುವ ಶೈಲಿಯನ್ನು ಗಮನಿಸಿ. ಸದನದ ಸದಸ್ಯನೊಬ್ಬ ಯಾವುದೇ ಹುದ್ದೆಯಲ್ಲಿದ್ದರೂ ಸದನಕ್ಕೆ ಸ್ಪೀಕರ್ ಅವರೇ ಉಳಿದೆಲ್ಲವರಿಗಿಂತ ದೊಡ್ಡವರು. ಎಲ್ಲರೂ ಅವರಿಗೆ ಮನವಿ ಮಾಡುವ ರೀತಿಯಲ್ಲಿ ಅಡ್ರೆಸ್ ಮಾಡುತ್ತಾರೆ. ಅದರೆ ಶಿವಕುಮಾರ್ ಮಾತಾಡುವ ಧಾಟಿ ಬೇರೆಯಾಗಿದೆ. ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಟಿಂಗ್ ಟೀಮ್ ಅಂತ ವಿರೋಧ ಪಕ್ಷದ ನಾಯಕರು ಹೇಳಿರುವುದನ್ನು ಕಡತ ತೆಗೆಯಬೇಕು, ಅಂತ ಅವರು ಹೇಳುತ್ತಾರೆ. ಬಿಜೆಪಿ ಶಾಸಕರೊಬ್ಬರು ಆಕ್ಷೇಪಣೆ ಎತ್ತಿದಾಗ, ಅವರು ಏಯ್ ಅಂತ ಸಂಬೋಧಿಸುತ್ತಾ ನಾನು ಸ್ಪೀಕರ್ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ, ನಂಗೂ ಕಾನೂನು ಗೊತ್ತಿದೆ ಅನ್ನುತ್ತಾರೆ. ಹಿಂದೆ ಕಾಂಗ್ರೆಸ್ ನವರು ಸಿಬಿಐಯನ್ನು ಚೋರ್ ಬಚಾವ್ ಇನ್ವೆಸ್ಟಿಗೇಟಿಂಗ್ ಟೀಮ್ ಅಂತ ಹೇಳಿದ್ರಲ್ಲ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಕಾಲೆಳೆಯುತ್ತಾರೆ. ಮಾತು, ಪ್ರತಿ ಮಾತು ಮುಂದುವರಿಯುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್ಚುವರಿ ಡಿಸಿಎಂ ಬಗ್ಗೆ ಮಾತನಾಡಿದ್ರೆ ನೋಟಿಸ್, ಬಾಯಿಗೆ ಬೀಗ ಹಾಕೊಂಡಿರಿ: ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ