Loading video

Bengaluru Stampede: ಕಾಲ್ತುಳಿತದಿಂದ ಆಗಿರುವ ಸಾವುಗಳು ಅಸಲಿಗೆ ಕ್ರೆಡಿಟ್​ಗಾಗಿ ನಡೆದ ಕೊಲೆಗಳು: ಪಿ ರಾಜೀವ್

Updated on: Jun 06, 2025 | 9:26 PM

ಕಾಲ್ತುಳಿತದಿಂದ ಉಂಟಾದ ಸಾವುಗಳು ಅಸಲಿಗೆ ಕ್ರೆಡಿಟ್ ಗಾಗಿ ನಡೆದಿರುವ ಕೊಲೆಗಳು, ಒಂದು ಖಾಸಗಿ ಕ್ಲಬ್ ಆಗಿರುವ ಆರ್​ಸಿಬಿ ಮತ್ತು ಸರ್ಕಾರದ ನಡುವೆ ಸಂಬಂಧ ಇರೋದು ಹೇಗೆ ಸಾಧ್ಯ? 24 ಮತ್ತು 48 ತಾಸು ಎಡಬಿಡದೆ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳ ಮಾತು ಕೇಳದೆ ಸತ್ಕಾರ ಸಮಾರಂಭ ಏರ್ಪಡಿಸಿದ್ದು ಯಾವ ಪರುಷಾರ್ಥಕ್ಕಾಗಿ? ಇದು ಅಪರಾಧಿಕ ಮನೋಭಾವವಲ್ಲದೆ ಮತ್ತೇನು ಎಂದು ರಾಜೀವ್ ಪ್ರಶ್ನಿಸಿದರು.

ಬೆಂಗಳೂರು, ಜೂನ್ 6: ಬಿಜೆಪಿ ಶಾಸಕ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ರಾಜಕಾರಣಕ್ಕೆ ಬರುವ ಮೊದಲು ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡಿರುವುದರಿಂದ ಕಾನೂನು ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇವತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಸಿಎಂ, ಡಿಸಿಎಂ ಮತ್ತು ಹೆಚ್​ಎಂ ವಿರುದ್ಧ ಕಾಲ್ತುಳಿತದ ಘಟನೆಗೆ ಸಂಬಂದಿಸಿದಂತೆ ಇತರ ಕೆಲ ಬಿಜೆಪಿ ನಾಯಕರ ಜೊತೆ ಬಂದಾಗ ಅವರು ಕೊಲೆ ಮತ್ತು ಅಪರಾಧಿಕ ನರಹತ್ಯೆ ಪದಗಳ ವಿವರಣೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಪ್ರಯೋಜನಕ್ಕಾಗಿ ಅಮಾಯಕರ ಬಲಿ ಪಡೆಯುತ್ತಲೇ ಇದೆ ಎಂದು ರಾಜೀವ್ ಹೇಳಿದರು.

ಇದನ್ನೂ ಓದಿ:  ಬೆಂಗಳೂರು ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ಅವರೇ ನೇರ ಹೊಣೆ ಎಂದ ವಿಪಕ್ಷಗಳು ಎತ್ತಿದ ಸಾಲು ಪ್ರಶ್ನೆಗಳು ಇಲ್ಲಿವೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ