ಪುನೀತ್​ ರಾಜ್​ಕುಮಾರ್ ಫೋಟೋಗೆ ಧ್ರುವ ಸರ್ಜಾ ಪುಷ್ಪ ನಮನ

Edited By:

Updated on: Apr 08, 2022 | 8:25 PM

‘ಬಾಂಡ್​ ರವಿ’ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಇಲ್ಲಿಯೇ ಇರುವ ಪುನೀತ್ ರಾಜ್​ಕುಮಾರ್ ಸಮಾಧಿಗೆ ಧ್ರುವ ಹಾಗೂ ವಿನೋದ್ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ.

ಪ್ರಮೋದ್ (Pramod) ನಾಯಕನಾಗಿ ನಟಿಸುತ್ತಿರುವ ‘ಬಾಂಡ್ ರವಿ’ ಸಿನಿಮಾಗೆ ಧ್ರುವ ಸರ್ಜಾ (Dhruva Sarja) ಹಾಗೂ ‘ಯಂಗ್ ಟೈಗರ್’ ವಿನೋದ್ ಪ್ರಭಾಕರ್ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಧ್ರುವ-ವಿನೋದ್ (Vinod Prabhakar) ಅವರು ಪ್ರಮೋದ್ ಬೆನ್ನುತಟ್ಟಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಧ್ರುವ ಸರ್ಜಾ ಕ್ಯಾಮರಾಗೆ ಚಾಲನೆ ನೀಡಿದರೆ, ವಿನೋದ್​ ಪ್ರಭಾಕರ್ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಇಲ್ಲಿಯೇ ಇರುವ ಪುನೀತ್ ರಾಜ್​ಕುಮಾರ್ ಸಮಾಧಿಗೆ ಧ್ರುವ ಹಾಗೂ ವಿನೋದ್ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್

ಚಿರು ಸರ್ಜಾ ಕೊನೇ ಸಿನಿಮಾಗೆ ಕಂಠದಾನ ಮಾಡಿದ ಧ್ರುವ ಸರ್ಜಾ