Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಹಾರಿ ಬಂದು ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜ ಬಿಡಿಸಿದ ಹಕ್ಕಿ, ನಿಜವಾಗಿಯೂ ನಡೆದಿದ್ದೇನು?

ಕೇರಳ: ಹಾರಿ ಬಂದು ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜ ಬಿಡಿಸಿದ ಹಕ್ಕಿ, ನಿಜವಾಗಿಯೂ ನಡೆದಿದ್ದೇನು?

ನಯನಾ ರಾಜೀವ್
|

Updated on:Aug 18, 2024 | 10:54 AM

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿಯೊಂದು ಬಿಡಿಸಿದೆ ಎನ್ನುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಕ್ಕಿಯೊಂದು ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರ ಧ್ವಜವನ್ನು ತಪ್ಪಿಸಿ ಬಳಿಕ ಅಲ್ಲಿಂದ ಹಾರಿ ಹೋಗುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದಾದ ಬಳಿಕ ನಿಜವಾದ ವಿಡಿಯೋ ಇದೀಗ ವೈರಲ್ ಆಗಿದೆ.

ಮೊದಲಿನ ವಿಡಿಯೋ ಹಾಗೂ ಈಗಿನ ವಿಡಿಯೋ ಒಂದೇ ಆಗಿದ್ದು, ಆದರೆ ಎರಡೂ ಬೇರೆ ಬೇರೆ ಕಡೆಗಳಿಂದ ಚಿತ್ರೀಕರಿಸಲಾಗಿದೆ.
ಹಕ್ಕಿಯೇ ಬಂದು ರಾಷ್ಟ್ರ ಧ್ವಜವನ್ನು ಸರಿಪಡಿಸುವ ರೀತಿಯಲ್ಲಿ ಕಂಡುಬಂದಿತ್ತು, ಆದರೆ ಹೊಸ ವಿಡಿಯೋದಲ್ಲಿ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತೆರೆಯಲು ಸ್ವಲ್ಪ ಹೊತ್ತು ತೆಗೆದುಕೊಂಡಿದೆ. ಆ ಸಂದರ್ಭದಲ್ಲಿ ಹಕ್ಕಿಯೊಂದು ಹಾರಿ ಬಂದು ಅಲ್ಲೇ ಇರುವ ತೆಂಗಿನ ಮರದ ಮೇಲೆ ಕೂರುತ್ತದೆ. ಅದೇ ಸಮಯದಲ್ಲಿ ರಾಷ್ಟ್ರಧ್ವಜ ತೆರೆದು ಅದರಲ್ಲಿದ್ದ ಹೂಗಳು ಹೊರಗೆ ಬೀಳುತ್ತವೆ. ಮರದಲ್ಲಿದ್ದ ಹಕ್ಕಿ ಹಾರಿ ಹೋಗುತ್ತದೆ. ಇದು ಮತ್ತೊಬ್ಬರು ತೆಗೆದ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ನಂತರ ಜನರಿಂದ ವಿವಿಧ ರೀತಿಯ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.ಈ ಹಕ್ಕಿ ನಿಜವಾಗಿಯೂ ತೆಂಗಿನ ಮರದ ಮೇಲೆ ಕುಳಿತಿತ್ತು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತ್ರಿವರ್ಣ ಧ್ವಜದ ಬಳಿ ಬಂದಂತೆ ಗೋಚರಿಸುವ ಕೋನದಿಂದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 18, 2024 10:53 AM