ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಸಿಲುಕಿ ಹೈರಾಣು

ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಸಿಲುಕಿ ಹೈರಾಣು

ದಿಲೀಪ್​, ಚೌಡಹಳ್ಳಿ
| Updated By: ಮದನ್​ ಕುಮಾರ್​

Updated on: Jul 26, 2024 | 9:57 PM

ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಫ್ಯಾಮಿಲಿಯವರು ದೇವರ ಮೊರೆಹೋಗಿದ್ದಾರೆ. ದರ್ಶನ್​ ಅವರ ತಮ್ಮ ದಿನಕರ್​ ತೂಗುದೀಪ ಇಂದು (ಜುಲೈ 26) ಮೈಸೂರಿಗೆ ಬಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಅವರ ಜೊತೆ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಕೂಡ ಇದ್ದರು. ಭಾರಿ ಜನಜಂಗುಳಿ ನಡುವೆ ಅವರು ದೇವರ ಆಶೀರ್ವಾದ ಪಡೆದು ಬಂದಿದ್ದಾರೆ.

ನಟ ದರ್ಶನ್​ ಅವರ ಕುಟುಂಬದವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅತ್ತ, ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದರೆ, ಇತ್ತ ದರ್ಶನ್​ ಸಹೋದರ ದಿನಕರ್ ತೂಗುದೀಪ ಅವರು ಮೈಸೂರಿನಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕೆ ಬಂದಿದ್ದಾರೆ. ದಿನಕರ್ ತೂಗುದೀಪ ಅವರ ಫ್ಯಾಮಿಲಿ ಜೊತೆ ನಟ ಚಿಕ್ಕಣ್ಣ ಕೂಡ ಸಾಥ್ ನೀಡಿದ್ದಾರೆ. ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ನೆರೆದಿದ್ದರು. ಜನಜಂಗುಳಿಯಲ್ಲಿ ಸರದಿ ಸಾಲಿನಲ್ಲಿ ನಿಂತ ದಿನಕರ್​, ಚಿಕ್ಕಣ್ಣ ಮುಂತಾದವರು ಹೈರಾಣಾದರು. ಅದರ ನಡುವೆಯೂ ಚಿಕ್ಕಣ್ಣ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.