ಸ್ಟಿಂಗ್ ಆಪರೇಷನ್ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು: ಎಚ್ಕೆ ಪಾಟೀಲ್
ಗದಗನಲ್ಲಿ ಮಾತನಾಡಿದ ಎಚ್ಕೆ ಪಾಟೀಲ್, ಸ್ಟಿಂಗ್ ಆಪರೇಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ.ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಏನೂ ಲಾಭ ಇಲ್ಲ, ಮನ್ನಣೆ ಸಿಗಲ್ಲ. ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡಬೇಕು. ಅವರ ಬದಲಿಗೆ ಬೇರೆಯವರನ್ನು ತನಿಖೆಗೆ ನೇಮಿಸಬೇಕು. 200 ಅಧಿಕಾರಿಗಳು ಟ್ರ್ಯಾಪ್ ಆಗಿರೋದಕ್ಕೆ ಸಾಕ್ಷಿ ಏನಿದೆ? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದಿದ್ದಾರೆ.
ಗದಗ, (ಅಕ್ಟೋಬರ್ 19): ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ರಾಜರಣದಲ್ಲಿ ಸಂಚಲನ ಮೂಡಿಸಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆದ್ರೆ, ಇದುವರೆಗೂ ವಿಡಿಯೋ ಹಂಚಿಕೆ ಮಾಡಿಕೊಂಡಿದ್ಯಾರು ಎನ್ನುವುದು ಮಾತ್ರ ಪತ್ತೆಯಾಗಿಲ್ಲ. ಇನ್ನೊಂದೆಡೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ನ್ಯಾಯಯುತವಾಗಿ ತನಿಖೆ ಆಗಬೇಕು. ಇದರ ಹಿಂದಿರುವವರನ್ನು ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಎಚ್ಡಿ ಪಾಟೀಲ್ ಪ್ರತಿಕ್ರಿಯಿಸಿ, ತನಿಖೆ ಮಾಡಲು ಹಿಂಜರಿಯವಂತ ಪೊಲೀಸರನ್ನು ಸರ್ಕಾರ ತಕ್ಷಣ ವಜಾ ಮಾಡಬೇಕು ಎಂದಿದ್ದಾರೆ.
ಈ ಬಗ್ಗೆ ಗದಗನಲ್ಲಿ ಮಾತನಾಡಿದ ಎಚ್ಕೆ ಪಾಟೀಲ್, ಸ್ಟಿಂಗ್ ಆಪರೇಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ.ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಏನೂ ಲಾಭ ಇಲ್ಲ, ಮನ್ನಣೆ ಸಿಗಲ್ಲ. ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡಬೇಕು. ಅವರ ಬದಲಿಗೆ ಬೇರೆಯವರನ್ನು ತನಿಖೆಗೆ ನೇಮಿಸಬೇಕು. 200 ಅಧಿಕಾರಿಗಳು ಟ್ರ್ಯಾಪ್ ಆಗಿರೋದಕ್ಕೆ ಸಾಕ್ಷಿ ಏನಿದೆ? ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ
ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್ಗೆ ಡಿಕೆಶಿ ಕೌಂಟರ್
ಹೆಚ್ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್ಗೆ ಸೀಮಿತ ಅನುಮತಿ ನೀಡಿದ ಕೋರ್ಟ್

