Loading video

ನಮ್ಮ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕ್ರಮಗಳಲ್ಲಿ ನುಗ್ಗಿಸಿ ಅಡ್ಡಿಪಡಿಸೋದು ನಮಗೂ ಗೊತ್ತು: ಪ್ರದೀಪ್ ಈಶ್ವರ್

Updated on: Apr 29, 2025 | 6:55 PM

ನಿನ್ನೆ ಬೆಳಗಾವಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತಾಡುತ್ತಾ ಹೆಚ್ಚು ಕಡಿಮೆ ಇದೇ ಮಾತಗಳನ್ನಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರ್ ಮತ್ತು ಪ್ರದೀಪ್ ಈಶ್ವರ್ ಹೇಳಿದ ರೀತಿ ಬಿಜೆಪಿ ಸಭೆಗಳಲ್ಲಿ ಗೊಂದಲವುಂಟು ಮಾಡಿದರೆ ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರೂ ಮಾಡುತ್ತಾರೆ. ಕರ್ನಾಟಕದಲ್ಲಿ ಸಾರ್ವಜನಿಕ ಸಭೆಗಳೇ ನಡೆಯದಂಥ ಸ್ಥಿತಿ!

ಚಿಕ್ಕಬಳ್ಳಾಪುರ, ಏಪ್ರಿಲ್ 29: ನಿನ್ನೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ (Opposition parties) ನಡುವೆ ಹೇಳಿಕೆಗಳ ಸಮರಕ್ಕೆ ಕಾರಣವಾಗಿದೆ, ಚಿಕ್ಕಬಳ್ಳಾಪುರದಲ್ಲಿ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿಯವರು ಇಂಥ ಆಟಗಳನ್ನು ನಿಲ್ಲಿಸದಿದ್ದರೆ ರಾಜ್ಯದಲ್ಲಿ ಅವರ ಯಾವ ಕಾರ್ಯಕ್ರಮವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮಾಡಲು ಬಿಡೋದಿಲ್ಲ, ಮುಖ್ಯಮಂತ್ರಿಯವರು ಮಾತಾಡುವಾಗ ಅಡ್ಡಿಪಡಿಸಬಾರದೆಂಬ ಕನಿಷ್ಟ ಸೌಜನ್ಯತೆಯೂ ಬಿಜೆಪಿಯವರಿಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ:  ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಇ ಖಾತಾಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ