ಸಿಎಂ ಸಿದ್ದರಾಮಯ್ಯ ಹಣಕಾಸು ಆಯೋಗದ ಮುಂದಿಟ್ಟ ಬೇಡಿಕೆಗಳೇನು ಗೊತ್ತಾ?

|

Updated on: Aug 29, 2024 | 3:32 PM

ಸಿಎಂ ಸಿದ್ದರಾಮಯ್ಯ ಇಂದು 16ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಸಭೆ ಮಾಡಿದ್ದಾರೆ. ಈ ವೇಳೆ ಕೇಂದ್ರ ಹಣಕಾಸು ಆಯೋಗದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.

ಬೆಂಗಳೂರು, ಆಗಸ್ಟ್​​ 29: ಬೆಂಗಳೂರು ಅಭಿವೃದ್ಧಿಗೆ 55,000 ಕೋಟಿ ರೂ. ಖರ್ಚಾಗುತ್ತದೆ. ಅದರಲ್ಲಿ ಅರ್ಧದಷ್ಟು ಮೊತ್ತ ಕೊಡಬೇಕೆಂದು ಕೇಂದ್ರ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಫ್‌ಸಿಎಲ್‌ಸಿ ಇರುವ ರಾಜ್ಯಗಳನ್ನು ಫೀನಲೈಜಡ್ ಮಾಡಬಾರದು. ನಮ್ಮ ಫರ್ಮಾರನ್ಸ್ ಚೆನ್ನಾಗಿದೆ, ಜಿಡಿಪಿಗೆ 9% ಕೊಡುಗೆ ಇದೆ. ಇಷ್ಟಿದ್ದರೂ ನಾವು 1.5% ಪಡೆದುಕೊಳುತ್ತಿದ್ದೇವೆ. ಅದನ್ನು ಸರಿ ಮಾಡಬೇಕು ಅಂತ ಹೇಳಿದ್ದೇವೆ. 16 ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ 50% ಕೇಳಿದರು ಅದಕ್ಕಾಗಿ ಒಪ್ಪಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ. ಹಲವು ರಾಜ್ಯಗಳು ಕೇಳ್ತಿದ್ದಾವೆ, ಏನ್ ಮಾಡ್ತಾರೆ ನೋಡೋಣ ಎಂದಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on