AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ದೋಣಿಕಡವು ಪ್ರದೇಶ ಸಂಪೂರ್ಣ ಜಲಾವೃತ, ಶಾಲಾಮಕ್ಕಳಿಗೆ ನಾಡದೋಣಿಯೇ ಸಾರಿಗೆ ಸಾಧನ

ಮಳೆಗಾಲದಲ್ಲಿ ದೋಣಿಕಡವು ಪ್ರದೇಶ ಸಂಪೂರ್ಣ ಜಲಾವೃತ, ಶಾಲಾಮಕ್ಕಳಿಗೆ ನಾಡದೋಣಿಯೇ ಸಾರಿಗೆ ಸಾಧನ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 18, 2025 | 2:11 PM

Share

ಕೂಡಕಂಡಿಪೈಸಾರಿ ಮತ್ತು ಬೇಂಗೂರುಗಳ ಜನ ಮಳೆಗಾಲದಲ್ಲಿ ನಗರ ಪ್ರದೇಶಗಳಿಗೆ ಹೋಗಲು ದೋಣಿಯ ಮೊರೆ ಹೋಗುವುದರಿಂದ ಈ ಪ್ರದೇಶಕ್ಕೆ ದೋಣಿಕಡವು ಅಂತ ಹೆಸರು ಬಂದಿದೆ. ಬೇಂಗೂರಲ್ಲಿ ಸುಮಾರು 70 ಕುಟುಂಬಗಳು ವಾಸವಾಗಿದ್ದು, ಅವರಲ್ಲಿ 40-50 ವಿದ್ಯಾರ್ಥಿಗಳೂ ಇದ್ದಾರಂತೆ. ಮಡಿಕೇರಿಯಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಅವರಿಗೆ ನಾಡದೋಣಿ ಬಿಟ್ಟರೆ ಬೇರೆ ದಾರಿಯಿಲ್ಲ.

ಮಡಿಕೇರಿ, ಜೂನ್ 18: ಪ್ರತಿ ಮಳೆಗಾಲದ ಗೋಳು ಇದು. ಮಡಿಕೇರಿ ತಾಲೂಕಿನ (Madikere taluk ) ಚೇರಂಬಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೂಡಕಂಡಿಪೈಸಾರಿ ಮತ್ತು ಬೇಂಗೂರುಗಳ ಜನ ಮಳೆಗಾಲ ಮುಗಿಯುವವರೆಗೆ ಮಡಿಕೇರಿ ಮತ್ತು ಚೇರಂಬಾಣಿಗೆ ಹೋಗಬೇಕಾದರೆ ಈ ಮರದ ದೋಣಿಯನ್ನೇ ಆಶ್ರಯಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಕಾಣುತ್ತಿರುವ ಪ್ರದೇಶವೆಲ್ಲ ಜಲಾವೃತಗೊಳ್ಳುತ್ತದೆ. ಶಾಲೆ ಕಾಲೇಜುಗಳಿಗೆ ಮತ್ತು ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಹೋಗುವವರಿಗೆ ದೋಣಿ ಬಿಟ್ಟು ಬೇರೆ ಯಾವ ಸಾರಿಗೆ ಸಾಧನವೂ ಇಲ್ಲ. ದೋಣಿ ಸಾಗುತ್ತಿರುವ ನೀರಿನಡಿ ರಸ್ತೆಯಿದೆ ಮತ್ತು ಅದರ ಮೇಲೆ ಸುಮಾರು 15 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ:   ಸಕಲೇಶಪುರ: ಅಪಾಯದಲ್ಲಿ ಹೇಮಾವತಿ ನದಿ ಸೇತುವೆ, ಮಳೆಗಾಲಕ್ಕೂ ಮುನ್ನವೇ ಆತಂಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ