ಪ್ರತಿ ರೈತನಿಗೆ 5000 ರೂ. ಬರ ಪರಿಹಾರ: ಮೊದಲ ಕಂತಿನಲ್ಲಿ 2500 ರೂ. ರಿಲೀಸ್
ದೀಪಾವಳಿ ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಅಲ್ಲದೇ ಇಂದು (ನವೆಂಬರ್ 05) ಅಧಿಕೃತವಾಗಿ ರೈತರ ಅಕೌಂಟ್ಗೆ ಬರ ಪರಿಹಾರ ಹಣವನ್ನು ಜಮೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 05): 2500 ರೂ. ಇದ್ದ ಬರ ಪರಿಹಾರವನ್ನು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ 5000 ರೂಪಾಯಿಗೆ ಹೆಚ್ಚಿಸಿದ್ದು, ಇಂದು (ನವೆಂಬರ್ 05) ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ , ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿತರಣೆಗೆ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ಕೊದಲ ಕಂತು 2500 ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು. ಇದರೊಂದಿಗೆ ಪ್ರತಿ ಎಕರೆಗೆ 2500 ನಿಗದಿ ಮಾಡಿದ್ದು, ಎರಡು ಜಮೀನು ಎಕರೆಗಿಂತ ಹೆಚ್ಚು ಇದ್ದರೂ ಸಹ 5 ಸಾವಿರ ಫಿಕ್ಸ್ ಮಾಡಲಾಗಿದೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು 2,500 ರೂ. ಬರ ಪರಿಹಾರ ಕೊಡುತ್ತಿದ್ದೇವೆ. ನಾವು ಹೇಳಿದಂತೆ 1,250 ಕೋಟಿ ರೂ. ಹಣ ಹಾಕುತ್ತಿದ್ದೇವೆ. ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಹೋಗಲಿದೆ. ದೀಪಾವಳಿ ಮುಗಿದ ಬಳಿಕ ಇನ್ನೂ 2,500 ರೂ. ಕೊಡುತ್ತೇವೆ. ಪ್ರತಿ ರೈತನಿಗೆ ಒಟ್ಟು 5,000 ರೂ. ನೀಡಲಾಗುತ್ತೆ ಎಂದರು.
ಇನ್ನೂ ಡಿಸಿಎಂ ಪರಮೇಶ್ವರ್ ಮಾತನಾಡಿ, ವಿಧಾನಸಭೆಯಲ್ಲಿ ನಾವು ಪ್ರತಿ ಎಕರೆಗೆ ಹೇಳಿರಲಿಲ್ಲ, ನಾವು ಪ್ರತಿ ರೈತನಿಗೆ ಅಂತ ಹೇಳಿದ್ದು, ಅದರರಂತೆ ಪ್ರತಿ ರೈತನಿಗೆ ಕೊಡುತ್ತೇವೆ. 57 ಲಕ್ಷ ರೈತರಿಗೆ ಫಲಾನುಭವಿಗಳು ಇದ್ದಾರೆ. ಮೊದಲ ಕಂತಿನ ಇನ್ಪುಟ್ ಸಬ್ಸಿಡಿ 2,500 ಹಣ ಬಿಡುಗಡೆ ಮಾಡಿದ್ದೇವೆ. ಇನ್ನೂ ಸ್ವಲ್ಪ ದಿನದ ನಂತರ ಎರಡನೇ ಕಂತಿನಲ್ಲಿ ಮತ್ತೆ 2,500 ರೂ. ಹಣ ಬಿಡುಗಡೆ ಮಾಡಲಿದ್ದೇವೆ. ಆ ಮೂಲಕ ಪ್ರತಿ ರೈತನಿಗೆ 5,000 ರೂ. ಪರಿಹಾರ ಸಿಗಲಿದೆ. ಒಟ್ಟು ಒಬ್ಬ ರೈತರಿಗೆ 5,000 ರೂ. ಇನ್ಪುಟ್ ಸಬ್ಸಿಡಿ ಪರಿಹಾರ ಬಿಡುಗಡೆ ಆಗಲಿದೆ.2 ಎಕ್ಕರೆಗಿಂತ ಜಾಸ್ತಿ ಭೂಮಿ ಇದ್ದರೂ 5 ಸಾವಿರ ಹಣ ಮಾತ್ರ ಸಿಗಲಿದೆ ಎಂದು ಸ್ಪಷ್ಷಪಡಿಸಿದರು.

