AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೀಮ’ ಫ್ಯಾನ್​ ಶೋ ಕ್ಯಾನ್ಸಲ್; ಸಿಟ್ಟಾದ ಅಭಿಮಾನಿಗಳಿಂದ ಪುಂಡಾಟ

‘ಭೀಮ’ ಫ್ಯಾನ್​ ಶೋ ಕ್ಯಾನ್ಸಲ್; ಸಿಟ್ಟಾದ ಅಭಿಮಾನಿಗಳಿಂದ ಪುಂಡಾಟ

ರಾಜೇಶ್ ದುಗ್ಗುಮನೆ
|

Updated on: Aug 09, 2024 | 10:30 AM

Share

‘ಭೀಮ’ ಪಕ್ಕಾ ಮಾಸ್ ಸಿನಿಮಾ. ಈ ಚಿತ್ರ ಇಂದು ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಇದು ಕೂಡ ರೌಡಿಸಂ ಸಿನಿಮಾ. ಇದರಲ್ಲಿ ಅಗಾಧವಾಗಿ ರಕ್ತ, ಮಚ್ಚು-ಲಾಂಗ್, ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಈ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಇಂದು (ಆಗಸ್ಟ್ 9) ರಿಲೀಸ್ ಆಗಿದೆ. ಈ ಚಿತ್ರವನ್ನು ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಭೀಮ’ ಸಿನಿಮಾಗೆ ಯಾವುದೇ ಫ್ಯಾನ್​ ಶೋ ಕೊಟ್ಟಿಲ್ಲ. 9 ಗಂಟೆ ನಂತರವೇ ಶೋ ಆಯೋಜನೆ ಮಾಡಲಾಗಿದೆ. ಆದಾಗ್ಯೂ ಹೊಸಪೇಟೆಯಲ್ಲಿ ಮುಂಜಾನೆ ಶೋ ಇದೆ ಎಂದು ಘೋಷಿಸಲಾಯಿತು. ಆದರೆ, ಶೋ ಪ್ರಸಾರ ಕಂಡಿಲ್ಲ. ಇದರಿಂದ ಸಿಟ್ಟಾದ ಫ್ಯಾನ್ಸ್ ಗೇಟ್​ಗಳನ್ನು ಮುರಿದು ಪುಂಡಾಟ ಮೆರೆದಿದ್ದಾರೆ. ಗೇಟ್​ನ ಬೀಗವನ್ನು ಕಿತ್ತು ಹಾಕಿದ್ದಾರೆ. ಮುಂಜಾನೆಯೇ ‘ಭೀಮ’ ಶೋ ನೋಡಬೇಕು ಎಂದು ಬಂದ ಫ್ಯಾನ್ಸ್​ಗೆ ಸಂಪೂರ್ಣ ನಿರಾಸೆಯಿಂದ ಹಿಂದಿರುಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More