ಅಶೋಕ್ ಕ್ಷಮೆಯಾಚನೆಗೆ ಇಂಜಿನಿಯರ್ಸ್​ ಪಟ್ಟು: ಅಷ್ಟಕ್ಕೂ ವಿಪಕ್ಷ ನಾಯಕ ಹೇಳಿದ್ದೇನು?

|

Updated on: Jul 25, 2024 | 11:11 PM

‘ರಾಜ್ಯದ ಇಂಜಿನಿಯರ್​ಗಳು ಮನೆಹಾಳರು’ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸದ್ಯ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಇಂಜಿನಿಯರ್​ಗಳ ನಿಯೋಗ ವಿರೋಧ ವ್ಯಕ್ತಪಡಿಸಿದ್ದು, ಪ್ರಗತಿಯ ರೂವಾರಿಗಳನ್ನು ಮನೆಹಾಳರೆಂದು ಕರೆದಿರುವುದು ಸರಿಯಲ್ಲ. ಹೀಗಾಗಿ ಆರ್.ಅಶೋಕ್​ ತಕ್ಷಣ ಇಂಜಿನಿಯರ್​ಗಳಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, ಜುಲೈ 25: ‘ರಾಜ್ಯದ ಇಂಜಿನಿಯರ್​ಗಳು ಮನೆಹಾಳರು’ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ (R Ashoka)  ಹೇಳಿದ ಹೇಳಿಕೆಗೆ ಇದೀಗ ಇಂಜಿನಿಯರ್​ಗಳು (Engeniers) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ಪ್ರಗತಿಯಲ್ಲಿ ಇಂಜಿನಿಯರ್​ಗಳ ಕೊಡುಗೆ ಗಣನೀಯವಾಗಿದೆ. ಅಣೆಕಟ್ಟು, ವಿದ್ಯುತ್ ಯೋಜನೆ, ಬೃಹತ್ ಕಟ್ಟಡ, ಐಟಿ-ಬಿಟಿಗೆ, ನಾಡಿನ ಅಭಿವೃದ್ಧಿಗೆ ಇಂಜಿನಿಯರ್​ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಗತಿಯ ರೂವಾರಿಗಳನ್ನು ಮನೆಹಾಳರೆಂದು ಕರೆದಿರುವುದು ಸರಿಯಲ್ಲ. ವಿಪಕ್ಷ ನಾಯಕ ಅಶೋಕ್ ತಕ್ಷಣ ಇಂಜಿನಿಯರ್​ಗಳ ಕ್ಷಮೆಯಾಚಿಸಬೇಕು ಎಂದು ಇಂಜಿನಿಯರ್​ಗಳ ನಿಯೋಗದಿಂದ ಮನವಿ ಮಾಡಿದ್ದಾರೆ. ಇಂಜಿನಿಯರ್​ಗಳ ಮನವಿ ಬೆನ್ನಲ್ಲೇ ಆರ್.ಅಶೋಕ್​ಗೆ ಡಿಕೆ ಶಿವಕುಮಾರ್​ ಕರೆ ಮಾಡಿದ್ದು, ತಮ್ಮ ಹೇಳಿಕೆ ಹಿಂಪಡೆಯುವಂತೆ  ಮನವಿ ಮಾಡಿದ್ದಾರೆ. ವಿಡಿಯೋ ನೋಡಿ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jul 25, 2024 11:09 PM