‘ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು’; ಬಸ್ತಾರ್ ಪುನರುಜ್ಜೀವನದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ
ಕಳೆದ 5 ದಶಕಗಳ ಕಾಲ ಬಸ್ತಾರ್ನ ಬಡ ಆದಿವಾಸಿ ಸಮುದಾಯಗಳು ನಕ್ಸಲಿಸಂನಿಂದ ಅಪಾರ ಕಷ್ಟ-ನಷ್ಟಗಳನ್ನು ಎದುರಿಸಿವೆ. ಕೇವಲ ನಕ್ಸಲಿಸಂ ಅಂತ್ಯವಾಯಿತು ಎಂದಾಕ್ಷಣ 5 ದಶಕಗಳ ಕಾಲ ಜನರು ಅನುಭವಿಸಿದ ಯಾತನೆಗಳು ಮಾಯವಾಗುವುದಿಲ್ಲ. ಹೀಗಾಗಿ ಸಂತ್ರಸ್ತರ ಪುನರ್ವಸತಿ ಮತ್ತು ಕಲ್ಯಾಣ ಕಾರ್ಯಗಳು ಅತ್ಯಂತ ಮುಖ್ಯವಾಗಿವೆ. ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಬೇರುಸಹಿತ ಕಿತ್ತುಹಾಕುವ ಸಂಕಲ್ಪ ಮಾಡಲಾಗಿದ್ದು, ಬಸ್ತಾರ್ ಅನ್ನು ಮತ್ತೊಮ್ಮೆ ಅತ್ಯಂತ ಜೀವಂತ ಹಾಗೂ ಸುಂದರವಾದ ಪ್ರದೇಶವನ್ನಾಗಿ ಪರಿವರ್ತಿಸಲು ಪ್ರತಿ ಪ್ರಜೆಯೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ನವದೆಹಲಿ, ಅಕ್ಟೋಬರ್ 15: “5 ದಶಕಗಳ ಕಾಲ ನಕ್ಸಲಿಸಂನಿಂದ ತತ್ತರಿಸಿರುವ ಛತ್ತೀಸ್ಗಢದ ಬಸ್ತಾರ್ ಪ್ರದೇಶದಲ್ಲಿ ಕೇವಲ ಉಗ್ರವಾದವನ್ನು ಮಟ್ಟ ಹಾಕಿದರೆ ಸಾಲದು, ಅಲ್ಲಿ ನಕ್ಸಲಿಸಂನ ಪ್ರತಿಯೊಂದು ಕುರುಹನ್ನೂ ಸಂಪೂರ್ಣವಾಗಿ ಅಳಿಸಿಹಾಕಿ, ಬಸ್ತಾರ್ ಅನ್ನು ಮತ್ತೆ ಅಭಿವೃದ್ಧಿಯ ಹಾದಿಯಲ್ಲಿ ಮುಂಚೂಣಿಗೆ ತರಬೇಕು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ದಿವ್ಯಾಂಗರಿಗೆ ಹಾಗೂ ನಕ್ಸಲ್ ಹಿಂಸಾಚಾರದಿಂದ ಸಂತ್ರಸ್ತರಾದವರಿಗೆ ಸಲಕರಣೆಗಳನ್ನು ವಿತರಿಸುವ ‘ಸೇವಾ ಸಂಕಲ್ಪ ಅಭಿಯಾನ’ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ತಾರ್ ಪ್ರದೇಶದ ಮರು ನಿರ್ಮಾಣ ಹಾಗೂ ನಕ್ಸಲ್ ಪೀಡಿತ ಸಂತ್ರಸ್ತರ ಪುನರ್ವಸತಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕಳೆದ 5 ದಶಕಗಳ ಕಾಲ ಬಸ್ತಾರ್ನ ಬಡ ಆದಿವಾಸಿ ಸಮುದಾಯಗಳು ನಕ್ಸಲಿಸಂನಿಂದ ಅಪಾರ ಕಷ್ಟ-ನಷ್ಟಗಳನ್ನು ಎದುರಿಸಿವೆ. ಕೇವಲ ನಕ್ಸಲಿಸಂ ಅಂತ್ಯವಾಯಿತು ಎಂದಾಕ್ಷಣ 5 ದಶಕಗಳ ಕಾಲ ಜನರು ಅನುಭವಿಸಿದ ಯಾತನೆಗಳು ಮಾಯವಾಗುವುದಿಲ್ಲ. ಹೀಗಾಗಿ ಸಂತ್ರಸ್ತರ ಪುನರ್ವಸತಿ ಮತ್ತು ಕಲ್ಯಾಣ ಕಾರ್ಯಗಳು ಅತ್ಯಂತ ಮುಖ್ಯವಾಗಿವೆ. ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಬೇರುಸಹಿತ ಕಿತ್ತುಹಾಕುವ ಸಂಕಲ್ಪ ಮಾಡಲಾಗಿದ್ದು, ಬಸ್ತಾರ್ ಅನ್ನು ಮತ್ತೊಮ್ಮೆ ಅತ್ಯಂತ ಜೀವಂತ ಹಾಗೂ ಸುಂದರವಾದ ಪ್ರದೇಶವನ್ನಾಗಿ ಪರಿವರ್ತಿಸಲು ಪ್ರತಿ ಪ್ರಜೆಯೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ