ಪತಿಯ ಎದುರೇ ಸಮಂತಾಗೆ ಪ್ರಪೋಸ್ ಮಾಡಿದ ಅಭಿಮಾನಿ; ರಾಜ್ ರಿಯಾಕ್ಷನ್ ಏನು?
ಚಿತ್ರರಂಗದ ಖ್ಯಾತ ನಟಿ ಸಮಂತಾ ಅವರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬ ಪ್ರಪೋಸ್ ಮಾಡಿದ ಅಪರೂಪದ ಘಟನೆ ನಡೆದಿದೆ. ವಿಶೇಷವೆಂದರೆ, ವೇದಿಕೆ ಮೇಲಿದ್ದ ನಟಿಯ ಪತಿಯ ಎದುರೇ ಈ ಆಸಕ್ತಿದಾಯಕ ಪ್ರಸಂಗ ಜರುಗಿದೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುತ್ತಿದೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲು ಪ್ರತಿಕ್ರಿಯಿಸುತ್ತಿದ್ದಾರೆ.
ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಕಾರ್ಯಕ್ರಮದ ವೇಳೆ ಫನ್ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಯೊಬ್ಬ ದಿಢೀರನೆ ವೇದಿಕೆ ಏರಿದ್ದಾನೆ. ನೇರವಾಗಿ ಸಮಂತಾ ಅವರ ಬಳಿ ಬಂದು ಮಂಡಿಯೂರಿ ನಿಂತು, ಕೈಯಲ್ಲಿದ್ದ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.
ಅಭಿಮಾನಿ ಪ್ರಪೋಸ್ ಮಾಡುವಾಗ ಸಮಂತಾ ಪಕ್ಕದಲ್ಲೇ ಅವರ ಪತಿ ರಾಜ್ ನಿದಿಮೋರು ಕುಳಿತಿದ್ದರು. ಈ ಇಡೀ ಪ್ರಸಂಗವನ್ನು ಕಂಡು ಪತಿ ರಾಜ್ ಸೇರಿದಂತೆ ವೇದಿಕೆ ಮೇಲಿದ್ದ ಉಳಿದ ಕಲಾವಿದರು ನಕ್ಕಿದ್ದಾರೆ. ಅಭಿಮಾನಿಯ ಈ ಅನಿರೀಕ್ಷಿತ ಧೈರ್ಯ ಮತ್ತು ಪ್ರೀತಿಯನ್ನು ಕಂಡು ಸಮಂತಾ ಕೂಡ ಆಶ್ಚರ್ಯಚಕಿತರಾಗಿ ನಸುನಕ್ಕಿದ್ದಾರೆ.
ಪ್ರಪೋಸ್ ಮಾಡಿದ ನಂತರ ಆ ಅಭಿಮಾನಿ ತನ್ನ ಮೊಬೈಲ್ ತೆಗೆದು ಸಮಂತಾ ಜೊತೆಗೆ ಸೆಲ್ಫಿ ಕೇಳಿದ್ದಾನೆ. ಆತನ ಪ್ರೀತಿಯನ್ನು ಗೌರವಿಸಿದ ನಟಿ, ಹೂವಿನ ಗುಚ್ಛವನ್ನು ಕೈಯಲ್ಲಿ ಹಿಡಿದು ಮುಗುಳ್ನಗುತ್ತಾ ಸೆಲ್ಫಿಗೆ ಪೋಸ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.


