AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್​​ನಿಂದ ಶಿಪ್ಸ್‌ವರೆಗೆ ಎಲ್ಲವೂ ಸ್ವದೇಶಿ: ವಡೋದರಾದಲ್ಲಿ ಯುವಜನತೆಗೆ ಪ್ರಧಾನಿ ಮೋದಿ ಕರೆ

ಚಿಪ್​​ನಿಂದ ಶಿಪ್ಸ್‌ವರೆಗೆ ಎಲ್ಲವೂ ಸ್ವದೇಶಿ: ವಡೋದರಾದಲ್ಲಿ ಯುವಜನತೆಗೆ ಪ್ರಧಾನಿ ಮೋದಿ ಕರೆ

ನಯನಾ ರಾಜೀವ್
|

Updated on:Sep 08, 2026 | 1:40 PM

Share

ದೇಶದ ಮೂಲೆ ಮೂಲೆಯಲ್ಲಿ ಸುಳ್ಳಿನ ಮೂಲಕ ದಿಕ್ಕುತಪ್ಪಿಸುವವರಿದ್ದರೂ, ಭಾರತದ ಯುವಜನತೆ (ಜೆನ್​ ಝಿ) ಸತ್ಯದ ಕರೆಗೆ ಓಗೊಟ್ಟು ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಡೋದರಾದ 'ನಮೋ ಫಾರ್ ವಿಕಸಿತ ಭಾರತ' ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವು 'ಚಿಪ್​ನಿಂದ ಶಿಪ್ಸ್‌ವರೆಗೆ' (ಮೈಕ್ರೋಚಿಪ್‌ನಿಂದ ಹಿಡಿದು ಹಡಗುಗಳವರೆಗೆ) ಪ್ರತಿಯೊಂದು ಉಪಕರಣ ಮತ್ತು ಅಂತಿಮ ಉತ್ಪನ್ನಗಳನ್ನು ಸ್ವತಃ ತಯಾರಿಸುವ ಮೂಲಕ ಉತ್ಪಾದನಾ ರಂಗದಲ್ಲಿ ಸ್ವಾವಲಂಬನೆಯ ಹೊಸ ಗಾಥೆ ಬರೆಯುತ್ತಿದೆ ಎಂದರು.

ವಡೋದರಾ, ಸೆಪ್ಟೆಂಬರ್ 08: ದೇಶದ ಮೂಲೆ ಮೂಲೆಯಲ್ಲಿ ಸುಳ್ಳಿನ ಮೂಲಕ ದಿಕ್ಕುತಪ್ಪಿಸುವವರಿದ್ದರೂ, ಭಾರತದ ಯುವಜನತೆ (ಜೆನ್​ ಝಿ) ಸತ್ಯದ ಕರೆಗೆ ಓಗೊಟ್ಟು ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಡೋದರಾದ ‘ನಮೋ ಫಾರ್ ವಿಕಸಿತ ಭಾರತ’ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವು ‘ಚಿಪ್​ನಿಂದ ಶಿಪ್ಸ್‌ವರೆಗೆ’ (ಮೈಕ್ರೋಚಿಪ್‌ನಿಂದ ಹಿಡಿದು ಹಡಗುಗಳವರೆಗೆ) ಪ್ರತಿಯೊಂದು ಉಪಕರಣ ಮತ್ತು ಅಂತಿಮ ಉತ್ಪನ್ನಗಳನ್ನು ಸ್ವತಃ ತಯಾರಿಸುವ ಮೂಲಕ ಉತ್ಪಾದನಾ ರಂಗದಲ್ಲಿ ಸ್ವಾವಲಂಬನೆಯ ಹೊಸ ಗಾಥೆ ಬರೆಯುತ್ತಿದೆ ಎಂದರು.

ದೇಶಾದ್ಯಂತ 55 ಲಕ್ಷ ಕುಟುಂಬಗಳು ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಅಳವಡಿಸಿಕೊಂಡಿದ್ದು, ಇದರಲ್ಲಿ 11 ಲಕ್ಷ ಕುಟುಂಬಗಳು ಗುಜರಾತ್‌ನಲ್ಲೇ ಇವೆ ಎಂದು ಅವರು ತಿಳಿಸಿದರು. ಇಂದು ಭಾರತ 200 ಗಿಗಾವಾಟ್‌ಗೂ ಅಧಿಕ ಸೋಲಾರ್ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ ಹೊಂದಿದ್ದು, ಇದು ‘ಪಿಎಂ ಸೂರ್ಯ ಘರ್: ಮುಫ್ತ್​​ ಬಿಜ್ಲಿ ಯೋಜನೆ’ಯ ಯಶಸ್ಸಿಗೆ ಕಾರಣವಾಗಿದೆ. ಈ ಬದಲಾವಣೆಯು ಉತ್ಪಾದನೆ, ಸ್ಥಾಪನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಲಕ್ಷಾಂತರ ಯುವಕರಿಗೆ ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ಪ್ರಶಂಸಿಸಿದರು.

ದೇಶದ ಯುವಜನತೆಯ ವೈಚಾರಿಕ ಪ್ರಜ್ಞೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ಇಂದಿನ ಯುವ ಪೀಳಿಗೆ ಕೇವಲ ಭಾಷಣ ಅಥವಾ ಸುಳ್ಳು ಪ್ರಚಾರಗಳಿಗೆ ಮರುಳಾಗುವುದಿಲ್ಲ. ಅವರು ವಾಸ್ತವ, ತಂತ್ರಜ್ಞಾನ ಮತ್ತು ದೃಢ ಫಲಿತಾಂಶಗಳನ್ನು ನಂಬಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ನಾವೀನ್ಯತೆ ಹಾಗೂ ನವೋದ್ಯಮಗಳ ಮೂಲಕ ಜಾಗತಿಕ ಸ್ಪರ್ಧೆಗೆ ಭಾರತೀಯ ಯುವಕರು ಸಜ್ಜಾಗಿದ್ದಾರೆ ಎಂದು ಹುರಿದುಂಬಿಸಿದರು.

ಭಾರತ ಸೆಮಿಕಂಡಕ್ಟರ್ ಮೈಕ್ರೋಚಿಪ್‌ಗಳಿಂದ ಹಿಡಿದು ಬೃಹತ್ ಸಮುದ್ರ ನೌಕೆಗಳು ಮತ್ತು ಯುದ್ಧನೌಕೆಗಳವರೆಗೂ ಪ್ರತಿಯೊಂದು ಕಚ್ಚಾ ಭಾಗ ಹಾಗೂ ಅಂತಿಮ ಉತ್ಪನ್ನವನ್ನು ದೇಶದ ಒಳಗೇ ವಿನ್ಯಾಸಗೊಳಿಸಿ ತಯಾರಿಸುವ ಸಂಪೂರ್ಣ ಪೂರೈಕೆ ಸರಪಳಿಯನ್ನು ರೂಪಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 08, 2026 01:38 PM

Follow Us