ಪ್ರಾಸಿಕ್ಯೂಷನ್ಗೆ ಸ್ಯಾಂಕ್ಷನ್ ಎಂದರೆ ಸಿಎಂ ವಿರುದ್ಧ ತನಿಖೆ ನಡೆಸಲು ಪೊಲೀಸ್ಗೆ ಅನುಮತಿ ನೀಡಿದಂತೆ: ಬಿವಿ ಆಚಾರ್ಯ, ಹಿರಿಯ ವಕೀಲ
ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಸಿಕ್ಕಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಅನಿವಾರ್ಯತೆ ಇರಲ್ಲ, ತನಿಖೆ ಮುಗಿದು ವಿಚಾರಣೆ ನ್ಯಾಯಾಲಯದಲ್ಲಿ ಶುರುವಾದರೂ ರಾಜೀನಾಮೆ ಸಲ್ಲಿಸಬೇಕಿಲ್ಲ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಲ್ಲಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಜೈಲಿಗೆ ಹೋಗುವ ಮೊದಲು ತಾವಾಗಿಯೇ ರಾಜೀನಾಮೆ ಸಲ್ಲಿಸಿದ್ದರು ಎಂದು ಬಿವಿ ಆಚಾರ್ಯ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಬಗ್ಗೆ ರಾಜ್ಯದ ಖ್ಯಾತ ಮತ್ತು ಹಿರಿಯ ವಕೀಲ ಬಿವಿ ಆಚಾರ್ಯ ಅವರು; ಈಗ ಸಿಎಂ ಮುಂದಿರುವ ದಾರಿಗಳ ವಿವರಣೆ ನೀಡಿದ್ದಾರೆ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅಂದರೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕು ಅಂತಲ್ಲ, ಮುಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಪೊಲೀಸ್ ತನಿಖೆಗೆ ಅವರು ಅನುಮತಿ ನೀಡಿದ್ದಾರೆ, ಈಗ ಸಿಎಂ ವಿರುದ್ಧ ಪೊಲೀಸರು ತನಿಖೆ ನಡೆಸಲು ಮುಕ್ತರು ಎಂದು ಸೀನಿಯರ್ ಅಡ್ವೋಕೇಟ್ ಹೇಳಿದರು. ಚುನಾಯಿತ ಮುಖ್ಯಮಂತ್ರಿಯೊಬ್ಬರ ವಿರುದ್ಧ ತನಿಖೆ ಮತ್ತು ಪ್ರಾಸಿಕ್ಯೂಷನ್ ನಡೆಸಲು ಯಾವುದೇ ಕಾನೂನು ಇಲ್ಲ ದೂರು ಮತ್ತು ದಾಖಲೆಗಳನ್ನು ಆಧರಿಸಿ ಕೇವಲ ರಾಜ್ಯಪಾಲ ಮಾತ್ರ ಪೊಲೀಸ್ ತನಿಖೆಗೆ ಅನುಮತಿ ನೀಡಬಹುದು ಎಂದು ಆಚಾರ್ಯ ಹೇಳಿದರು. ಇದನ್ನು ಕಾನೂನಾತ್ಮಕವಾಗಿ ಎದುರಿಸಲು ಮುಖ್ಯಮಂತ್ರಿಯವರಿಗೆ ಅವಕಾಶವಿದೆ, ರಾಜ್ಯಪಾಲರ ಸ್ಯಾಂಕ್ಷನ್ ಅನ್ನು ಅವರು ಹೈ ಕೋರ್ಟ್ ಇಲ್ಲವೇ ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನಿಸಬಹುದು ಎಂದು ವಕೀಲ ಆಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ, ಕಾನೂನು ಸಮಾಲೋಚನೆಯಲ್ಲಿ ಸಿಎಂ