Gujarat Flood: ಗುಜರಾತ್​ನಲ್ಲಿ ಪ್ರವಾಹದ ಎಚ್ಚರಿಕೆ; ಹೈವೇ ಮೇಲೆ ಭೋರ್ಗರೆಯುತ್ತಿರುವ ಮಳೆ ನೀರು

|

Updated on: Aug 26, 2024 | 5:34 PM

ಗುಜರಾತ್​ನಲ್ಲಿ ಭಾರೀ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುಜರಾತ್​ನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ನಖ್ತ್ರಾನಾ - ಲಖ್ಪತ್ ಹೆದ್ದಾರಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ ರಸ್ತೆಯ ಮೇಲೆ ನದಿಯ ನೀರು ಉಕ್ಕಿ ಹರಿಯುತ್ತಿದೆ.

ಅಹಮದಾಬಾದ್: ಮುಂದಿನ 2-3 ದಿನಗಳಲ್ಲಿ ಗುಜರಾತ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಗುಜರಾತ್ ಜೊತೆಗೆ, ರಾಜಸ್ಥಾನ ಮತ್ತು ಮಧ್ಯ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮಳೆಯಿಂದ ಉಂಟಾದ ಪ್ರವಾಹವು ಈಗಾಗಲೇ ಗುಜರಾತ್‌ನಲ್ಲಿ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಇಲ್ಲಿ 17 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಾಲಿ ಕೊಚ್ಚಿಹೋದ ನಂತರ 7 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ನದಿಗಳೆಲ್ಲ ತುಂಬಿ ಹರಿದು, ಪ್ರವಾಹದ ಆತಂಕ ಸೃಷ್ಟಿಸಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ