ಮೊದಲ ಅವಕಾಶ ನೀಡಿದ್ದ ಗುರುಪ್ರಸಾದ್ ನಿಧನಕ್ಕೆ ಡಾಲಿ ಧನಂಜಯ ಭಾವುಕ ಮಾತು
ಗುರುಪ್ರಸಾದ್ ನಿರ್ದೇಶನ ಮಾಡಿದ್ದ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ನಟಿಸಿದ್ದರು. ಆ ಬಳಿಕ ಅವರಿಬ್ಬರ ನಡುವೆ ಒಡನಾಟ ಬೆಳೆದಿತ್ತು. ಇಂದು (ನವೆಂಬರ್ 3) ಗುರುಪ್ರಸಾದ್ ಅವರ ನಿಧನದ ಸುದ್ದಿ ತಿಳಿದು ಡಾಲಿ ಧನಂಜಯ್ ಅವರು ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ನಟ ಡಾಲಿ ಧನಂಜಯ್ ಅವರು ಗುರುಪ್ರಸಾದ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ‘ಇತ್ತೀಚೆಗೆ ಅವರನ್ನು ಭೇಟಿಯಾಗದೇ ಬಹಳ ಗ್ಯಾಪ್ ಆಗಿತ್ತು. ನನ್ನ ‘ಬಡವ ರಾಸ್ಕಲ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನನ್ನನ್ನು ಮೊದಲ ಸಿನಿಮಾ ಮೂಲಕ ಪರಿಚಯಿಸಿದ್ದೇ ಅವರು. ಆ ಪ್ರೀತಿ, ಆ ಗೌರವಕ್ಕೋಸ್ಕರ ನಾನು ಇಂದು ಬಂದಿದ್ದೇನೆ. ಅವರು ಕೊಟ್ಟ ಅವಕಾಶಕ್ಕೆ ನಾನು ಚಿರಋಣಿ ಆಗಿರುತ್ತೇನೆ’ ಎಂದು ಡಾಲಿ ಧನಂಜಯ ಹೇಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ ದುನಿಯಾ ವಿಜಯ್ ಅವರಿಗೂ ಡಾಲಿ ಧನ್ಯವಾದ ಅರ್ಪಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.