AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯಗೆ ಹೆಚ್​​.ಡಿ. ಕುಮಾರಸ್ವಾಮಿ ಸವಾಲ್​: ಕೇಂದ್ರ ಸಚಿವ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯಗೆ ಹೆಚ್​​.ಡಿ. ಕುಮಾರಸ್ವಾಮಿ ಸವಾಲ್​: ಕೇಂದ್ರ ಸಚಿವ ಹೇಳಿದ್ದೇನು?

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 05, 2026 | 11:40 AM

Share

ದಾವಣಗೆರೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕುಟುಂಬ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಪುತ್ರನ ರಾಜಕೀಯ ಪ್ರವೇಶವನ್ನು ಪ್ರಶ್ನಿಸಿದ ಅವರು, ತಮ್ಮ ಕುಟುಂಬ ರಾಜಕೀಯ ಭಿನ್ನವಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ, ಅಧಿಕಾರದ ಅಹಂಕಾರ ಮತ್ತು ನಿಗಮಗಳಲ್ಲಿನ ಭ್ರಷ್ಟಾಚಾರದ ಕುರಿತು ಟೀಕೆ ಮಾಡಿದ್ದಾರೆ.

ದಾವಣಗೆರೆ, ಏಪ್ರಿಲ್​​ 05: ಜೆಡಿಎಸ್​​ ಬಗ್ಗೆ ಟೀಕಿಸುವ ಸಿಎಂ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿ ಚುನಾವಣೆಗೆ ಸ್ಫರ್ಧಿಸಲಿ. ಆಗ ಅವರು ಎಷ್ಟು ಕ್ಷೇತ್ರ ಗೆಲ್ಲುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕುಟುಂಬ ರಾಜಕಾರಣದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ತಮ್ಮ ಕುಟುಂಬದ ರಾಜಕೀಯ ಪ್ರವೇಶವು ಜನರ ಬೆಂಬಲದಿಂದ ಆದದ್ದು, ಆದರೆ ಸಿದ್ದರಾಮಯ್ಯರ ಮಗನ ರಾಜಕೀಯ ಪ್ರವೇಶವು ರಾಜ್ಯದ ಉದ್ದಾರಕ್ಕಲ್ಲ, ಬದಲಿಗೆ ವಸೂಲಿಗಾಗಿ ಎಂದು ಆರೋಪಿಸಿದ್ದಾರೆ. ಜೆಡಿಎಸ್ 40 ಸೀಟುಗಳನ್ನು ಗೆದ್ದಿದ್ದು ಸ್ವಂತ ಶಕ್ತಿಯಿಂದ. 130-140 ಸೀಟು ಗೆದ್ದಿದ್ದೀವಿ ಎಂಬ ಅಹಂಕಾರ ಶಾಶ್ವತವಲ್ಲ. ತಮಿಳುನಾಡಲ್ಲಿ ಡಿಎಂಕೆ ಬಳಿಯಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್​ 28 ಸೀಟುಗಳನ್ನು ಪಡೆದಿದ್ದು, ಆ ಪೈಕಿ ಕೆಲ ಕ್ಷೇತ್ರಗಳಿಗೂ ಅಭ್ಯರ್ಥಿಗಳಿಲ್ಲದೆ ಬೀದಿಯಲ್ಲಿ ಹೋಗುವವರನ್ನು ತಂದು ನಿಲ್ಲಿಸಿದ್ದಾರೆ ಎಂದು ಹೆಚ್​​ಡಿಕೆ ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More