ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು

|

Updated on: Sep 25, 2024 | 4:57 PM

ಇತಿಹಾಸ ಪ್ರಸಿದ್ದ ಹಾಸನಾಂಬೆ ದರ್ಶನಕ್ಕೆ ಭರ್ಜರಿ ತಯಾರಿ ಆರಂಭಗೊಂಡಿವೆ. ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದ್ದು, ದರ್ಶನಕ್ಕೆ ಬರುವ ಭಕ್ತರಿಗೆ ನೀಡುತ್ತಿದ್ದ ಲಡ್ಡು ವಿತರಣೆಯಲ್ಲಿ ಈ ಬಾರಿ ದೊಡ್ಡ ಮಾರ್ಪಾಡು ಮಾಡಲಾಗಿದೆ.

ಹಾಸನ, ಸೆ.25: ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುವ ಇತಿಹಾಸ ಪ್ರಸಿದ್ದ ಹಾಸನಾಂಬೆ(Hasanamba) ದರ್ಶನಕ್ಕೆ ಭರ್ಜರಿ ತಯಾರಿ ಆರಂಭಗೊಂಡಿವೆ. ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದ್ದು, ದರ್ಶನಕ್ಕೆ ಬರುವ ಭಕ್ತರಿಗೆ ನೀಡುತ್ತಿದ್ದ ಲಡ್ಡು ವಿತರಣೆಯಲ್ಲಿ ಈ ಬಾರಿ ದೊಡ್ಡ ಮಾರ್ಪಾಡು ಮಾಡಲಾಗಿದೆ. ಹೌದು, ಈ ಹಿಂದೆ ವಿಶ್ವ ವಿಖ್ಯಾತ ತಿರುಪತಿ ಲಡ್ಡು ವಿತರಣೆ ಮಾಡುತ್ತಿದ್ದ ದೇಗುಲ ಆಡಳಿತ ಮಂಡಳಿಯೂ ಈ ಬಾರಿ ಇಸ್ಕಾನ್ ಸಂಸ್ಥೆಯು ತಯಾರಿಸುವ ಲಡ್ಡು ವಿತರಣೆಗೆ ಮುಂದಾಗಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಆಗಿರುವ ಲೋಪದಿಂದಾಗಿ ಗುಣಮಟ್ಟ ಹಾಗು ಪ್ರಾವಿತ್ರ್ಯತೆ ಕಾಪಾಡಿಕೊಳ್ಳಲು ಇಸ್ಕಾನ್ ಸಂಸ್ಥೆಯ ಲಡ್ಡು ವಿತರಣೆಗೆ ನಿರ್ಧರಿಸಲಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹೇಳಿದ್ದಿಷ್ಟು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on