ಸಿಎಂ ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ ಎಸ್ಪಿಗೆ ಗಡುವು ನೀಡಿದ ದೂರುದಾರ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಇಂದು(ಬುಧವಾರ) ಸಿಎಂ ವಿರುದ್ದ ಎಫ್ಐಆರ್ ದಾಖಲಿಸುವಂತೆ ದೂರುದಾರ ವಕೀಲ ಪ್ರದೀಪ್ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಸಿಎಂ ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ ಎಸ್ ಪಿಗೆ ಮೂರು ದಿನದ ಗಡುವು ಕೂಡ ನೀಡಿದ್ದಾರೆ.
ಮೈಸೂರು, ಸೆ.25: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಇಂದು(ಬುಧವಾರ) ಸಿಎಂ ವಿರುದ್ದ ಎಫ್ಐಆರ್ ದಾಖಲಿಸುವಂತೆ ದೂರುದಾರ ವಕೀಲ ಪ್ರದೀಪ್ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಸಿಎಂ ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ ಎಸ್ಪಿಗೆ ಮೂರು ದಿನದ ಗಡುವು ಕೂಡ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಕಾನೂನು ತಜ್ಞರ ಸಲಹೆ ಪಡೆದು ಹಿಂಬರಹ ನೀಡುತ್ತೇವೆ. ಇದುವರೆಗಿನ ತನಿಖಾ ವರದಿಯ ಕುರಿತು ಮಾಹಿತಿ ನೀಡುತ್ತೇವೆ ಅಂದಿದ್ದಾರೆ. ನಾನು ಇನ್ನು ಮೂರು ದಿನ ಬಿಟ್ಟು ಮತ್ತೆ ಮೈಸೂರಿಗೆ ಬರುತ್ತೇನೆ. ಮೂರು ದಿನದಲ್ಲಿ ಉತ್ತರ ಬಾರದೆ ಇದ್ದರೆ ಮೈಸೂರು ಲೋಕಾಯುಕ್ತ ಎಸ್ ಪಿ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ. ನಮ್ಮ ದೂರಿಗೆ ಹಿಂಬರಹ ನೀಡಲು ಇಷ್ಟೊಂದು ಸಮಯ ಕೇಳುತ್ತಿದ್ದಾರೆ. ಇನ್ನು ತನಿಖೆ ಯಾವ ರೀತಿ ಮಾಡುತ್ತಾರೆ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ ಎಂದು ಮೈಸೂರಿನಲ್ಲಿ ದೂರುದಾರ ಪ್ರದೀಪ್ ಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Wed, 25 September 24