AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ವಿರುದ್ಧ ಕೋರ್ಟ್​ ಲೋಕಾಯುಕ್ತ ತನಿಖೆ ಆದೇಶದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಮುಡಾ ಹಗರಣ ಸಂಬಂಧ ಹೈಕೋರ್ಟ್​​ನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾಗೊಂಡ ಬೆನ್ನಲ್ಲೇ ಇತ್ತ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲೂ ಸಹ ಸಿಎಂಗೆ ಹಿನ್ನೆಡೆಯಾಗಿದೆ. ಹೈಕೋರ್ಟ್​ ಆದೇಶವನ್ನು ಉಲ್ಲೇಖಿಸಿ ಜನಪ್ರತಿನಿಧಿಗಳ ಕೋರ್ಟ್​, ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಇನ್ನು ಈ ಬಗ್ಗೆ ಸಿಎಂ ಮೊದಲ ಪ್ರತಿಕ್ರಿಯೆ ನೀಡಿದ್ದು, ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ.

ತಮ್ಮ ವಿರುದ್ಧ ಕೋರ್ಟ್​ ಲೋಕಾಯುಕ್ತ ತನಿಖೆ ಆದೇಶದ ಬಗ್ಗೆ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on:Sep 25, 2024 | 2:42 PM

Share

ಬೆಂಗಳೂರು, (ಸೆಪ್ಟೆಂಬರ್ 25): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಬೆನ್ನಲ್ಲೇ ಜನಪ್ರತಿನಿಧಿಗಳ ನ್ಯಾಯಾಲಯವು ಸಹ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದು, ಕಾನೂನು ಪರಿಣಿತರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಜನಪ್ರತಿನಿಧಿ ಕೋರ್ಟ್​ ತೀರ್ಪಿನ ಬಗ್ಗೆ ಮೊಲದ ಬಾರಿಗೆ ಪ್ರತಿಕ್ರಿಯೆ ನೀಡಿಸಿರುವ ಸಿಎಂ, ನಿನ್ನೆ ಹೈಕೋರ್ಟ್ 17ಎ ಅನ್ವಯ ತನಿಖೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್​ ಆದೇಶ ಮೇಳೆ ಜನಪ್ರತಿನಿಧಿಗಳ ಕೋರ್ಟ್​ ತೀರ್ಪು ನೀಡಿದೆ/ ಕೋರ್ಟ್​ ತೀರ್ಪಿನ ಪ್ರತಿ ಸಿಕ್ಕಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ತನಿಖೆ ಎದುರಿಸಲು ನಾವು ತಯಾರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನಪ್ರತಿನಿಧಿಗಳ ಕೋರ್ಟ್​ ತೀರ್ಪಿನ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮೊದಲ ಬಾರಿಗೆ ಮಾತನಾಡಿದ ಸಿಎಂ, ನಿನ್ನೆ ಹೈಕೋರ್ಟ್ 17ಎ ಅನ್ವಯ ತನಿಖೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್​ ಆದೇಶ ಮೇಳೆ ಜನಪ್ರತಿನಿಧಿಗಳ ಕೋರ್ಟ್​ ತೀರ್ಪು ನೀಡಿದೆ. ಕೋರ್ಟ್​ ತೀರ್ಪಿನ ಪ್ರತಿ ಸಿಕ್ಕಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ತನಿಖೆ ಎದುರಿಸಲು ನಾವು ತಯಾರಿದ್ದೇವೆ ತನಿಖೆ ಮಾಡಲು ಮೈಸೂರು ಲೋಕಾಯುಕ್ತಗೆ ಕೋರ್ಟ್​ ಸೂಚನೆ. ಪೂರ್ಣ ಆದೇಶದ ಪ್ರತಿ ಸಿಕ್ಕಿದ ಬಳಿಕ ಮುಂದಿನ ತೀರ್ಮಾನ ಎಂದರು.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ

ನಾವು ಯಾವುದಕ್ಕೂ ಹೆದರಲ್ಲ, ತನಿಖೆಗೆ ನಾವು ತಯಾರಿದ್ದೇವೆ. ಆದ್ರೆ ಈಗ ಕೊಟ್ಟಿರುವ ಆದೇಶವನ್ನು ಇನ್ನೂ ಓದಿಲ್ಲ. ಕೇರಳದಿಂದ ಬಂದ ಮೇಲೆ ಆದೇಶದಲ್ಲಿ ಏನಿದೆ ನೋಡುತ್ತೇನೆ. ಕೋರ್ಟ್​ ಆದೇಶ ಸಿಕ್ಕಿದ ಮೇಲೆ ವಕೀಲರ ಜತೆ ಚರ್ಚಿಸ್ತೇನೆ ಆ ನಂತರ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾವು ರಚಿಸಿರುವ ತನಿಖಾ ಆಯೋಗಕ್ಕೆ ಕೋರ್ಟ್​​ ತಡೆ ನೀಡಿಲ್ಲ. ಸಂಪೂರ್ಣವಾಗಿ ಆದೇಶ ಓದಿದ ಮೇಲೆ ನಾಳೆ ಪ್ರತಿಕ್ರಿಯೆ ನೀಡುತ್ತೇನೆ, ನಿನ್ನೆಯೂ ನಾನು ಹೇಳಿದ್ದೇನೆ, ಈಗಲೂ‌ ಪುನರುಚ್ಚರಿಸುತ್ತಿದ್ದೇನೆ. ತನಿಖೆಗೆ ನಾನು ಹೆದರುವುದಿಲ್ಲ. ದೂರುದಾರರು ಮೈಸೂರಿನವರು, ಹೀಗಾಗಿ ಅಲ್ಲೇ ತನಿಖೆ ಆಗುತ್ತೆ. ಆದೇಶ ಓದಿದ ನಂತರ ಸಂಪೂರ್ಣ ಪ್ರತಿಕ್ರಿಯೆ ನೀಡಬೇಕು. ಆದೇಶದ ಪ್ರತಿಯನ್ನು ಓದಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಮುಂದಿನ ನಿರ್ಧಾರದ ನಾಳೆ (ಸೆ.26) ಬೆಳಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:40 pm, Wed, 25 September 24