ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಶಿವಕುಮಾರ್ ನನಗೆ ಬೇಕಾಗಿದ್ದನ್ನು ಬೇಡಿಕೊಂಡಿದ್ದೇನೆ ಎಂದರು!

Updated on: Jul 04, 2025 | 12:47 PM

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲಾರದು ಎಂದು ಡಿಕೆ ಶಿವಕುಮಾರ್ ಎರಡು ಸಲ ಹೇಳುತ್ತಾರೆ. ನನಗೇನೋ ಬೇಕೋ ಅದನ್ನು ಬೇಡಿಕೊಂಡಿದ್ದೇನೆ ಅಂತ ಅವರು ಹೇಳಿರುವುದನ್ನು ಅರ್ಥೈಸಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗಲಾರದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಸಂದೇಶ ನೀಡಿದ್ದಾರೆ, ಅದನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಡಿಸಿಎಂ ಹೇಳಿದರು.

ಮೈಸೂರು, ಜುಲೈ 4: ಚಾಮುಂಡಿ ತಾಯಿ (goddess Chamundi) ಎಲ್ಲರ ದುಃಖವನ್ನು ದೂರ ಮಾಡುವ ದೇವತೆಯಾಗಿದ್ದಾಳೆ, ಈ ಸಲ ಇಡೀ ರಾಜ್ಯಕ್ಕೆ ಒಳ್ಳೆಯ ಮಳೆ ನೀಡಿ ಜನರಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುವಂತೆ ಮಾಡಿದ್ದಾಳೆ ಎಂದು ತಮ್ಮ ಕುಟುಂಬದೊಂದಿಗೆ ಚಾಮುಂಡಿ ಬೆಟ್ಟಕ್ಕೆ ಅಗಮಿಸಿ ಪೂಜೆ ಸಲ್ಲಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಯಾವುದೇ ಕೆಲಸ ಆರಂಭಿಸುವ ಮೊದಲು ಚಾಮುಂಡಿ ತಾಯಿಗೆ ಸಲ್ಲಿಸುವುದು ನಮ್ಮಲ್ಲಿರುವ ಪದ್ಧತಿ, ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ, ನನಗೇನು ಬೇಕೋ ಅದನ್ನು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ, ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಮಾತಾಡಲಾರೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ನನಗೆ ಬೇರೆ ಮಾರ್ಗವಿಲ್ಲ, ಸಿದ್ದರಾಮಯ್ಯ ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ