ಹೆಚ್​ಡಿ ರೇವಣ್ಣ ಬೆಂಗಳೂರು ಮನೆ ಮುಂದೆ ಬೀದಿನಾಯಿಗಳೂ ಸುಳಿದಾಡುತ್ತಿಲ್ಲ, ಸುತ್ತಲೂ ಸ್ಮಶಾನ ಮೌನ

Updated on: Aug 02, 2025 | 6:30 PM

ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕರೆ ಅವರ 35ನೇ ಹುಟ್ಟುಹಬ್ಬವನ್ನು ಮಂಗಳವಾರ (ಆಗಸ್ಟ್ 5) ಇದೇ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸುವ ಯೋಚನೆ ರೇವಣ್ಣ ದಂಪತಿಗಿತ್ತು. ಅದರೆ ನಿನ್ನೆ ನ್ಯಾಯಾಲಯ ಪ್ರಜ್ವಲ್ ದೋಷಿ ಅಂತ ತೀರ್ಪಿತ್ತ ನಂತರ ಅವರ ಉತ್ಸಾಹ ಕಮರಿ ಹೋಗಿತ್ತು. ಇವತ್ತು ಜೀವಾವಧಿ ಶಿಕ್ಷೆಯ ಸುದ್ದಿ ಕೇಳಿ ರೇವಣ್ಣ ಮತ್ತು ಭವಾನಿಯವರ ಜಂಘಾಬಲವೇ ಉಡುಗಿಹೋಗಿದೆ.

ಬೆಂಗಳೂರು, ಆಗಸ್ಟ್ 2: ನಗರದ ಬಸವನಗುಡಿಯಲ್ಲಿರುವ (Basavangudi) ಹೆಚ್ ಡಿ ರೇವಣ್ಣನವರ ಈ ಮನೆಯನ್ನು ಹಲವು ಸಲ ನಿಮಗೆ ತೋರಿಸಿದ್ದೇವೆ. ಆದರೆ ಆಗ ಮನೆಯ ಮುಂದಿನ ವಾತಾವರಣಯೇ ಬೇರೆ ಇರುತಿತ್ತು. ಜನ ಇರುತ್ತಿದ್ದರು ಮತ್ತು ರೇವಣ್ಣರಾಗಲೀ ಅಥವಾ ಭವಾನಿಯವರಾಗಲೀ ನಗುನಗುತ್ತ ಮಾತಾಡುತ್ತಿದ್ದಿದ್ದು ಕಾಣಿಸುತಿತ್ತು. ಅದರೆ ಇವತ್ತು ಮನೆ ಬಳಿ ಸ್ಮಶಾನ ಮೌನ. ಭವಾನಿ ಮನೆಯೊಳಗಿರುವರಾದರೂ ಹೊರಗೆ ಬರಲು ತಯಾರಿಲ್ಲ. ಬೆಳಗ್ಗೆ ಹೊಳೆನರಸೀಪುರದಲ್ಲಿ ಮನೆದೇವರ ಪೂಜೆ ಮಾಡಿಸುತ್ತಿದ್ದ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಾರೆ. ಕೆಅರ್ ನಗರ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಜೀವಾವಧಿ ಶಿಕ್ಷೆ ಮತ್ತು ₹10ಲಕ್ಷಗಳ ಜುಲ್ಮಾನೆ ವಿಧಿಸಿದೆ. ತಂದೆತಾಯಿಗೆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:   ಪ್ರಜ್ವಲ್ ರೇವಣ್ಣ ವಿರುದ್ಧ ಬಂದಿರುವ ತೀರ್ಪಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಪ್ರಿಯಾಂಕ್ ಖರ್ಗೆ 

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ