Video: ಫ್ರಾನ್ಸ್ನಲ್ಲಿ ಬಿಸಿಲ ತಾಪ , ರೈಲಿನಲ್ಲಿ ಕೂರಲಾರದೆ ಹೊರ ಬಂದ ಪ್ರಯಾಣಿಕರು
ಫ್ರಾನ್ಸ್ನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿದೆ. ಯುರೋಪ್‌ನಲ್ಲಿ ಆವರಿಸಿರುವ ತೀವ್ರ ಬಿಸಿಗಾಳಿಯ ಭೀಕರತೆಗೆ ಫ್ರಾನ್ಸ್‌ನ ಪ್ಯಾರಿಸ್‌ನಿಂದ ನೈಸ್ ನಗರಕ್ಕೆ ಸಂಚರಿಸುತ್ತಿದ್ದ ರೈಲಿನ ನೂರಾರು ಪ್ರಯಾಣಿಕರು ತೀವ್ರವಾಗಿ ಕಂಗಾಲಾದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ನಿಂತ ರೈಲು ಎಸಿಯೂ ಇಲ್ಲದೆ ರೈಲಿನಲ್ಲೂ ಕೂರಲಾರದೆ ಪ್ರಯಾಣಿಕರು ಕೆಳಗಿಳಿದು ಬಂದಿರುವ ವಿಡಿಯೋ ವೈರಲ್ ಆಗಿದೆ.
ಪ್ಯಾರಿಸ್, ಮೇ 26: ಫ್ರಾನ್ಸ್ನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ತಾಪ ಹೆಚ್ಚಾಗಿದೆ. ಯುರೋಪ್‌ನಲ್ಲಿ ಆವರಿಸಿರುವ ತೀವ್ರ ಬಿಸಿಗಾಳಿಯ ಭೀಕರತೆಗೆ ಫ್ರಾನ್ಸ್‌ನ ಪ್ಯಾರಿಸ್‌ನಿಂದ ನೈಸ್ ನಗರಕ್ಕೆ ಸಂಚರಿಸುತ್ತಿದ್ದ ರೈಲಿನ ನೂರಾರು ಪ್ರಯಾಣಿಕರು ತೀವ್ರವಾಗಿ ಕಂಗಾಲಾದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ನಿಂತ ರೈಲು ಎಸಿಯೂ ಇಲ್ಲದೆ ರೈಲಿನಲ್ಲೂ ಕೂರಲಾರದೆ ಪ್ರಯಾಣಿಕರು ಕೆಳಗಿಳಿದು ಬಂದಿರುವ ವಿಡಿಯೋ ವೈರಲ್ ಆಗಿದೆ.
ದುರದೃಷ್ಟವಶಾತ್, ಆ ರೈಲಿನ ಬೋಗಿಗಳಲ್ಲಿ ಹವಾನಿಯಂತ್ರಣ (Air-Condition) ವ್ಯವಸ್ಥೆ ಇರಲಿಲ್ಲ. ಧಗಧಗಿಸುವ ಸೂರ್ಯನ ತಾಪಕ್ಕೆ ರೈಲಿನ ಒಳಗಿನ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರತೊಡಗಿತು. ಬೋಗಿಗಳ ಒಳಗೆ ಉಸಿರಾಡಲು ಗಾಳಿ ಸಿಗದೆ ಸಣ್ಣ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಇಡೀ ಪ್ರಯಾಣಿಕರು ನರಕಯಾತನೆ ಅನುಭವಿಸಿದರು.
ಕೊನೆಗೆ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ಮತ್ತು ಕೇವಲ ಉಸಿರಾಡುವ ಶುದ್ಧ ಗಾಳಿಗಾಗಿ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದು ಹಳಿಗಳ ಪಕ್ಕದಲ್ಲಿ ಆಶ್ರಯ ಪಡೆಯಬೇಕಾಯಿತು. ತೀವ್ರ ಹವಾಮಾನದ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಮುನ್ನೆಚ್ಚರಿಕೆ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 26, 2026 11:54 AM
ಕಣ್ಣೀರಿಡುತ್ತಾ ಕೆಎಸ್ಆರ್ಟಿಸಿ ಬಸ್ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ

