ಹೆಚ್ಚಿನ ವಿಚಾರಣೆಗಾಗಿ ವಕೀಲ ದೇವರಾಜೇಗೌಡನನ್ನು ವಶಕ್ಕೆ ಪಡೆದ ಹೊಳೆನರಸೀಪುರ ಪೊಲಿಸರು
ಕಳೆದ ಶುಕ್ರವಾರ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡರನ್ನು ಚಿತ್ರದುರ್ಗ ಪೊಲೀಸರಿಂದ ತಮ್ಮ ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಕರೆದೊಯ್ಯುವಾಗಲೂ ಅವರು ಥಮ್ಸ್ ಅಪ್ ಸನ್ನೆ ಮಾಡಿದ್ದರು ಮತ್ತು ಅದೇ ದಿನ ಮೆಡಿಕಲ್ ಚೆಕಪ್ ಗೆ ಒಯ್ದಾಗ ಸಹ ಅವರು ಮಾಧ್ಯಮಗಳಿಗೆ ಸತ್ಯಕ್ಕೆ ಜಯವಿದೆ ಅನ್ನುತ್ತಾ ವಿಕ್ಟರಿ ಸನ್ನೆ ತೋರಿದ್ದರು.
ಹಾಸನ: ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಲಯವೊಂದರಿಂದ ಮೇ 16 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲ್ಪಟ್ಟಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡನನ್ನು (D Devarajegowda) ಇವತ್ತು ಬೆಳಗ್ಗೆ ಹೊಳನಸೀಪುರ ಪೊಲೀಸರು (Holenarasipur police) ತಮ್ಮ ವಶಕ್ಕೆ ಪಡೆದರು. ಹೊಳೆನರಸೀಪುರದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಶೋಕ (Ashok DySP) ನೇತೃತ್ವದ ಪೊಲೀಸ್ ತಂಡವೊಂದು ದೇವರಾಜೇಗೌಡನನ್ನು ಹಾಸನದ ಜಿಲ್ಲಾ ಕಾರಾಗೃಹದಿಂದ ಕರೆದೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೊಲೀಸರ ವಶದಲ್ಲಿದ್ದರೂ ದೇವರಾಜೇಗೌಡರ ಆತ್ಮವಿಶ್ವಾಸ ಕುಂದಿಲ್ಲ. ಪೊಲೀಸ್ ವ್ಯಾನ್ ನಲ್ಲಿ ಕೂತ ಬಳಿಕ ಅವರು ಮಾಧ್ಯಮ ಕೆಮೆರಾಗಳ ಕಡೆ ನೋಡಿ ಥಮ್ಸ್ ಅಪ್ ಸನ್ನೆ ತೋರುತ್ತಾರೆ. ನಿಮಗೆ ನೆನಪಿರಬಹುದು, ಕಳೆದ ಶುಕ್ರವಾರ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡರನ್ನು ಚಿತ್ರದುರ್ಗ ಪೊಲೀಸರಿಂದ ತಮ್ಮ ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಕರೆದೊಯ್ಯುವಾಗಲೂ ಅವರು ಥಮ್ಸ್ ಅಪ್ ಸನ್ನೆ ಮಾಡಿದ್ದರು ಮತ್ತು ಅದೇ ದಿನ ಮೆಡಿಕಲ್ ಚೆಕಪ್ ಗೆ ಒಯ್ದಾಗ ಸಹ ಅವರು ಮಾಧ್ಯಮಗಳಿಗೆ ಸತ್ಯಕ್ಕೆ ಜಯವಿದೆ ಅನ್ನುತ್ತಾ ವಿಕ್ಟರಿ ಸನ್ನೆ ತೋರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗಂಭೀರ ಅರೋಪ ಹೊತ್ತು ಪೊಲೀಸರ ವಶದಲ್ಲಿದ್ದರೂ ದೇವರಾಜೇಗೌಡರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿಲ್ಲ!